ಜಿಲ್ಲೆ

VIDEO/ ಚಿರತೆ ಬಾಯಿಂದ ತಪ್ಪಿಸಿಕೊಳ್ಳೋದು ಸುಮ್ನೆ ಅಲ್ಲ.. ಬೆಚ್ಚಿ ಬೀಳಿಸುತ್ತೆ ಈ ದೃಶ್ಯ!

ಮಂಡ್ಯ: ಚಿರತೆ ದಾಳಿ.. ಚಿರತೆ ಪ್ರತ್ಯಕ್ಷ.. ಚಿರತೆಗೆ ಬಲಿ.. ಈ ಮಾತು ಕೇಳಿದಾಕ್ಷಣ ಮನದಲ್ಲಿ ಆತಂಕ ಮೂಡುತ್ತೆ. ಇನ್ನು ಆ ಚಿರತೆಯೇ ನಮ್ಮ ಮನೆ ಮುಂದೆ ಬಂದ್ರೆ? ಅದೂ ಒಬ್ಬರೇ ಇದ್ದ ವೇಳೆ?

ಅಬ್ಬಬ್ಬಾ ಅದನ್ನು ಕಲ್ಪಿಸಿಕೊಳ್ಳೋಕು ಮೈ ಜುಂ ಎನ್ನುತ್ತೆ. ಆದರೆ ಇಂತಹ ಘಟನೆ ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದಲ್ಲಿ ಸಂಭವಿಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿರಿ ‘ಆ ವ್ಯಕ್ತಿ ಬಗ್ಗೆ ಮಾತನಾಡಿ ನಾನೇ ಡಿಗ್ರೇಡ್ ಮಾಡಿಕೊಳ್ಳಲ್ಲ’ ಎಂದ ಕುಮಾರಸ್ವಾಮಿ

ಅರೆತಿಪ್ಪೂರು ಗ್ರಾಮದ ಮನೆಯೊಂದರ ಗೇಟ್​ ಹತ್ತಿರ ಬುಧವಾರ ರಾತ್ರಿ ಬಂದ ಚಿರತೆ ಇನ್ನೇನು ಒಳ ನುಗ್ಗಬೇಕು ಅಷ್ಟರಲ್ಲಿ ಅಲ್ಲೇ ಇದ್ದ ಆ ಮನೆಯ ವ್ಯಕ್ತಿ ಗಾಬರಿಯಿಂದ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ವ್ಯಕ್ತಿಯ ಚೀರಾಟದಿಂದಾಗಿ ಆ ಚಿರತೆಯೂ ಬೇರೆ ಕಡೆ ಹೋಗಿದೆ.

ಒಂದು ವೇಳೆ ವ್ಯಕ್ತಿಯು ಚಿರತೆ ಬರುತ್ತಿರುವುದನ್ನು ಅರೆಕ್ಷಣ ತಡವಾಗಿ ನೋಡಿದ್ದರೂ ಪ್ರಾಣಾಪಾಯ ಸಾಧ್ಯತೆ ನಿಶ್ಚಳವಾಗಿತ್ತು. ಅದೃಷ್ಟವಶಾತ್​ ಚಿರತೆಯನ್ನು ನೋಡಿದ ಕೂಡಲೇ ಆತ ಒಳಗೆ ಓಡಿ ಹೋಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿರತೆ ಬಂದಿದ್ದ ಸುದ್ದಿ ತಿಳಿದ ಆ ಮನೆಯ ಕುಟುಂಬಸ್ಥರು ಮಾತ್ರವಲ್ಲ, ಇದೀ ಗ್ರಾಮಸ್ಥರೂ ಆತಂಕದಲ್ಲಿದ್ದಾರೆ.