ಜಿಲ್ಲೆ

ಸಾಕುನಾಯಿ ಮೇಲೆ ಚಿರತೆ ದಾಳಿ

ಸೌಮ್ಯ ಆರ್

ಬೆಳ್ತಂಗಡಿ: ನೆರಿಯ ಅಂಕೊತ್ಯಾರ್ ಎಂಬಲ್ಲಿ ಸಿಜು ಎಂಬುವರ ಮನೆಯಂಗಳಕ್ಕೆ ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಬಂದ ಚಿರತೆ ಸಾಕುನಾಯಿ ಮೇಲೆ ದಾಳಿ ಮಾಡಿದೆ. ನಾಯಿ ಬೊಬ್ಬೆಗೆ ಎಚ್ಚೆತ್ತ ಮನೆಯವರು ಹೊರಗೆ ಬರುತ್ತಿದ್ದಂತೆ ನಾಯಿಯನ್ನು ಗಾಯಗೊಳಿಸಿ ಚಿರತೆ ಸಮೀಪದ ಅರಣ್ಯದತ್ತ ಓಡಿದೆ ಎಂದು ಮನೆಯವರು ತಿಳಿಸಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ನೆರಿಯ ಶಾಖೆ ಡಿಆರ್‌ಎಫ್‌ಒ ರವಿಚಂದ್ರ, ಚಿಬಿದ್ರೆ ಶಾಖೆ ಡಿಆರ್‌ಎಫ್‌ಒ ನಾಗೇಶ್ ಹಾಗೂ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸ್ಥಳದಲ್ಲಿ ಅರಣ್ಯ ಇಲಾಖೆ ಬೋನು ಅಳವಡಿಸುವ ಕುರಿತು ಚಿಂತನೆ ನಡೆಸಿದೆ.