ಜಿಲ್ಲೆ

ಚಿರತೆ ಹಾವಳಿಗೆ ನಾಯಿಗಳು ಬಲಿ

ಸೌಮ್ಯ ಆರ್

ಬೆಳ್ತಂಗಡಿ: ಉಜಿರೆ ಗ್ರಾಮದ ಹಡೀಲು ಪರಿಸರದಲ್ಲಿ ಚಿರತೆ ಕಾಟ ಕಂಡುಬಂದಿದ್ದು ಪರಿಸರದ ಹತ್ತಕ್ಕಿಂತ ಅಧಿಕ ನಾಯಿಗಳು ಕಾಣೆಯಾಗಿವೆ. ಹಡೀಲು ಪಾಂಡುರಂಗ ಮರಾಠೆ ಅವರ ಮನೆಯಲ್ಲಿ ಕಟ್ಟಿ ಹಾಕಿದ್ದ ಎರಡು ಸಾಕು ನಾಯಿಗಳನ್ನು ಚಿರತೆ ಎಳೆದೊಯ್ದಿದೆ. ಇದರಲ್ಲಿ ಒಂದು ನಾಯಿಯ ಕಳೇಬರ ಮನೆ ಸಮೀಪದ ತೋಟದಲ್ಲಿ ಪತ್ತೆಯಾಗಿದ್ದರೆ, ಇನ್ನೊಂದು ನಾಯಿ ಕಾಣೆಯಾಗಿದೆ. ಕಳೆದ 15 ದಿನಗಳ ಹಿಂದೆ ಇಲ್ಲಿಂದ 2 ಕಿ.ಮೀ. ದೂರದ ಕನ್ಯಾಡಿ-1 ಗ್ರಾಮದ ಮಾಲ್ದಂಡ ಎಂಬಲ್ಲಿ ಸಂಜೀವ ಗೌಡ ಎಂಬುವ ಮನೆ ಅಂಗಳದಲ್ಲಿ ಚಿರತೆ ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಪರಿಸರದಲ್ಲಿ ಚಿರತೆ ಓಡಾಟದ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಇದುವರೆಗೆ ಇಲಾಖೆ ಯಾವುದೇ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿಲ್ಲ. ಬೋನು ಅಳವಡಿಕೆ ಸಹಿತ ಇತರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.