ಜಿಲ್ಲೆ

ಅದ್ಭುತ ಗಾಯಕ ಬಿ. ಕೃಷ್ಣ ಕಾರಂತ್ ಇನ್ನಿಲ್ಲ | B Krishna Karanth

ರಮೇಶ್​ ಕುಮಾರ್​​ ಬಿ ಎಡಮೋಳೆ

B Krishna Karanth : ದೇಶದ ಪ್ರಸಿದ್ಧ ರಂಗಕರ್ಮಿ ದಿವಂಗತ ಬಿ. ವಿ. ಕಾರಂತರ ಸಹೋದರ ಬಿ. ಕೃಷ್ಣ ಕಾರಂತರು ನಿನ್ನೆ (ಡಿ.12) ಮಧ್ಯಾಹ್ನ ದೈವಾಧೀನರಾದರು.

ಉಡುಪಿ ಎಂಜಿಎಂ ಕಾಲೇಜಿನ ರೀಜನಲ್ ರಿಸರ್ಚ್ ಸೆಂಟರ್ ( RRC) ನ ನಿವೃತ್ತ ಉದ್ಯೋಗಿಯಾಗಿದ್ದ ಇವರು ಅದ್ಭುತ ಹಾಡುಗಾರರಾಗಿದ್ದರು. ಇವರ ಸಂಗೀತ ಕಾರ್ಯಕ್ರಮಗಳು, ಇವರ ಹಾಡಿನ ಕ್ಯಾಸೆಟ್​ಗಳು ಬಹಳ ಜನಪ್ರಿಯವಾಗಿದ್ದವು.

ರಂಗಭೂಮಿ ಉಡುಪಿಯ ಸದಸ್ಯರಾದ ಇವರು ಸಂಸ್ಥೆಯ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ, ಹಿನ್ನೆಲೆ ಹಾಡುಗಾರರಾಗಿ ಬಹಳಷ್ಟು ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಾಂಸ್ಕೃತಿಕ ರಂಗಕ್ಕೆ ನೀಡಿರುವ ಕೊಡುಗೆಗಾಗಿ ಇವರನ್ನು ಇತ್ತೀಚಿಗೆ ರಂಗಭೂಮಿ ಉಡುಪಿ ಸಂಸ್ಥೆಯು ಗೌರವಿಸಿ ಸನ್ಮಾನಿಸಿತ್ತು.