ಕರಂದಾಡಿ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯಿಂದ ಸ್ಪಂದನಾ ದಿವ್ಯಾಂಗರ ಸಂರಕ್ಷಣಾ ಸಂಸ್ಥಗೆ ಉಪಯುಕ್ತ ವಸ್ತುಗಳನ್ನು ಹಸ್ತಾಂತರಸಲಾಯಿತು.  
ಜಿಲ್ಲೆ

ಲೀಲಾಧರ ಶೆಟ್ಟರ ಬದುಕು ದಾರಿದೀಪ

ಇಂದಿರಾ ಎನ್ ಕೆ

ಪಡುಬಿದ್ರಿ: ಲೀಲಾಧರ ಶೆಟ್ಟರ ನಿಸ್ವಾರ್ಥ ಸೇವಾ ಬದುಕೇ ನಮ್ಮಲ್ಲರಿಗೂ ದಾರಿದೀಪ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇನ್ನಷ್ಟು ಅವರ ಪ್ರೀತಿಗೆ ಪಾತ್ರರಾಗಬೇಕು ಎಂದು ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಹೇಳಿದರು.

ಸಮಾಜ ರತ್ನ ದಿ.ಲೀಲಾಧರ ಶೆಟ್ಟಿ ಪುಣ್ಯಸ್ಮರಣೆ ಅಂಗವಾಗಿ ಕಾಪು ಕರಂದಾಡಿ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಸದಸ್ಯರು ಸಂತೆಕಟ್ಟೆಯ ಪ್ರಗತಿನಗರ ಸ್ಪಂದನಾ ಅಂಗವಿಕಲರ ಸಂರಕ್ಷಣಾ ಸಂಸ್ಥಗೆ ಉಪಯುಕ್ತ ವಸ್ತುಗಳನ್ನು ಹಸ್ತಾಂತರಸಿ ಮಾತನಾಡಿದರು.

ಸ್ಪಂದನಾ ಸಂಸ್ಥೆಯ ಉಮೇಶ್ ಭಜನಾ ಮಂಡಳಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಮಂಡಳಿ ಪದಾಧಿಕಾರಿಗಳಾದ ಅವಿನಾಶ್ ಶೆಟ್ಟಿ, ಅರುಣ್ ರಾವ್, ರವೀಂದ್ರ ಆಚಾರ್ಯ, ಸದಸ್ಯರಾದ ಸದಾಶಿವ ಶೆಟ್ಟಿಗಾರ್, ಸುರೇಂದ್ರ ಪೂಜಾರಿ, ರವಿ ನಾಯ್ಕ, ಗಣೇಶ್ ನಾಯ್ಕ, ಯಶವಂತ್ ಶೆಟ್ಟಿಗಾರ್, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ನಾಯ್ಕ, ಪದಾಧಿಕಾರಿಗಳಾದ ಸುನೀತಾ ಪೂಜಾರಿ, ದೇವಿಕಾ ಶೆಟ್ಟಿ, ಶ್ವೇತಾ ಶೆಟ್ಟಿ, ಸದಸ್ಯರಾದ ಪ್ರಜ್ಞಾ ಮಾರ್ಪಳ್ಳಿ ಉಪಸ್ಥಿತರಿದ್ದರು.