ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಆಶ್ರಯದಲ್ಲಿ ಪಿ.ಎಂ. ವಿಶ್ವಕರ್ಮ ಯೋಜನೆ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.ಯೂನಿಯನ್ ಬ್ಯಾಂಕ್ ಯಶವಂತ ಜೋಗಿ, ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಕಾರ್ಯಕಾರಿ ನಿರ್ವಾಹಕ ಡಾ. ಪ್ರವೀಣ್‌ರಾಜ್ ಎಸ್.ರಾವ್ ಮತ್ತಿತರರಿದ್ದರು. 
ಜಿಲ್ಲೆ

ಔಷಧೀಯ ಸಸ್ಯಗಳ ಉಪನ್ಯಾಸ: ಪ್ರಮಾಣಪತ್ರ ವಿತರಣೆ

ಸೌಮ್ಯ ಆರ್

ಬಂಟ್ವಾಳ: ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ, ರೋಮನ್ ಟೆಕ್ನಾಲಜಿ ಆಶ್ರಯದಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಅಂಗವಾಗಿ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಹಾಗೂ ಔಷಧೀಯ ಸಸ್ಯಗಳ ಕುರಿತು ಉಪನ್ಯಾಸ ಮಂಗಳವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಯೂನಿಯನ್ ಬ್ಯಾಂಕ್ ಯಶವಂತ ಜೋಗಿ, ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಕಾರ್ಯಕಾರಿ ನಿರ್ವಾಹಕ ಡಾ. ಪ್ರವೀಣ್‌ರಾಜ್ ಎಸ್.ರಾವ್ ಉದ್ಘಾಟಿಸಿದರು. ಮಂಗಳೂರಿನ ಔಷಧೀಯ ಸಸ್ಯ ತಜ್ಞ ದಿನೇಶ್ ನಾಯ್ಕ ಪ್ರದರ್ಶನ ನೀಡಿದರು. ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ನಿರ್ದೇಶಕಿ ನಿರ್ಮಲ ಪಿ.ರಾವ್, ಹಿರಿಯ ನಿರ್ದೇಶಕ ವೈ.ಎಂ.ರಾವ್, ಸಲಹೆಗಾರ ಉಪೇಂದ್ರನಾಯಕ್ ಉಪಸ್ಥಿತರಿದ್ದು, ಪ್ರಮಾಣಪತ್ರ ವಿತರಿಸಲಾಯಿತು. ರಾಮಕೃಷ್ಣ ಎಸ್.ಉಪ್ಪಳ ನಿರೂಪಿಸಿದರು. ಲಕ್ಷ್ಮೀದಾಸ್ ವಂದಿಸಿದರು.