ಬಂಟಕಲ್ ಕಾಲೇಜಿನಲ್ಲಿ ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ಚಂದ್ರಯಾನ 3ರ ಯಶಸ್ಸು ಕುರಿತು ಖಗೋಳಶಾಸ್ತ್ರಜ್ಞರ ಕ್ಲಬ್‌ನ ಸಂಚಾಲಕ ಡಾ. ರಮೇಶ್ ಭಟ್ ಉಪನ್ಯಾಸ ನೀಡಿದರು. 
ಜಿಲ್ಲೆ

ಬಂಟಕಲ್ ಕಾಲೇಜಿನಲ್ಲಿ ಉಪನ್ಯಾಸ

ಇಂದಿರಾ ಎನ್ ಕೆ

ಶಿರ್ವ: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಎಸ್‌ಟಿ ಘಟಕ ವತಿಯಿಂದ ಐಇಇಇ ಘಟಕದ ಸಹಯೋಗದೊಂದಿಗೆ ರಾಷ್ಟ್ರೀಯ ಬಾಹ್ಯಕಾಶ ದಿನದ ಅಂಗವಾಗಿ ಅಸ್ತಿತ್ವದಲ್ಲಿರುವ ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ಚಂದ್ರಯಾನ 3ರ ಯಶಸ್ಸು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಖಗೋಳಶಾಸ್ತ್ರಜ್ಞರ ಕ್ಲಬ್‌ನ ಸಂಚಾಲಕ ಡಾ. ರಮೇಶ್ ಭಟ್ ಸಮಗ್ರ ಮಾಹಿತಿ ನೀಡಿದರು. 2008ರಲ್ಲಿ ಕೈಗೊಂಡ ಚಂದ್ರಯಾನ ಚಂದ್ರನ ಮೇಲಿರುವ ನೀರಿನ ಅಂಶ ಕಂಡು ಹಿಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆ ತಂದುಕೊಟ್ಟಿದೆ ಎಂದರು. ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ನೀಲ್ ಆರ್ಮ್‌ಸ್ಟ್ರಾಂಗ್‌ಸಹಿತ ಬಾಹ್ಯಾಕಾಶ ಪರಿಶೋಧನೆಯಲ್ಲಿ ಸಾಧನೆ ಮಾಡಿದವರನ್ನು ಈ ಸಂದರ್ಭ ಸ್ಮರಿಸಿದರು.

ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿನಿ ಶ್ರಾವ್ಯತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಐಎಸ್‌ಟಿ ಘಟಕದ ಸಂಯೋಜಕ ಶಶಿಕಲಾ ಮತ್ತು ಐಇಇಇ ಘಟಕದ ಸಂಯೋಜಕ ಡಾ. ಸದಾನಂದ.ಎಲ್ ಸಂಯೋಜಿಸಿದರು.