ಮುದ್ರಾಡಿ ನೆಲ್ಲಿಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವಿದ್ಯಾದರ ಹೆಗ್ಡೆ ಎಸ್., ಶಿಬಿರ ಯೋಜನಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಸಹ ಶಿಬಿರಾಧಿಕಾರಿ ವೀರಾಂಜಿನಿ ಪಿ. ಅವರನ್ನು ಗೌರವಿಸಲಾಯಿತು.  
ಜಿಲ್ಲೆ

ಶಿಬಿರದಿಂದ ಸ್ವಾವಲಂಬನೆ ಅಂಶ ಕಲಿಕೆ

ಇಂದಿರಾ ಎನ್ ಕೆ

ಹೆಬ್ರಿ: ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಏಳು ದಿನಗಳಲ್ಲಿ ಕಲಿತ ಅಂಶಗಳು ಶಿಕ್ಷಣದ ಆಶಯವಾದ ಸ್ವಾವಲಂಬನೆಯನ್ನು ಕಲಿಸಿದೆ ಎಂದು ಸೀತಾರಾಮ ಹೆಬ್ಬಾರ್ ಕಬ್ಬಿನಾಲೆ ಹೇಳಿದರು.

ಮುದ್ರಾಡಿ ನೆಲ್ಲಿಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್. ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ರಮ್ಯಾ ಕಾಂತಿ ಮಾತನಾಡಿದರು. ಶಾಲೆ ವತಿಯಿಂದ ಪ್ರಾಂಶುಪಾಲ ಡಾ.ವಿದ್ಯಾದರ ಹೆಗ್ಡೆ ಎಸ್., ಶಿಬಿರ ಯೋಜನಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಸಹ ಶಿಬಿರಾಧಿಕಾರಿ ವೀರಾಂಜಿನಿ ಪಿ. ಅವರನ್ನು ಗೌರವಿಸಲಾಯಿತು.

ಹೆಬ್ರಿ ಉದ್ಯಮಿ ನರೇಂದ್ರ ನಾಯಕ್, ಹೆಬ್ರಿ ಗ್ರಾಪಂ ಸದಸ್ಯ ಎಚ್.ಜನಾರ್ದನ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಸುನಿತಾ, ಮುಖ್ಯಶಿಕ್ಷಕ ರವೀಂದ್ರ ಹೆಗ್ಡೆ, ಸಂತೋಷ್ ಶೆಟ್ಟಿ, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಇದ್ದರು. ಪ್ರವೀಣ ಶೆಟ್ಟಿ ಸ್ವಾಗತಿಸಿದರು. ಪ್ರಿಯಾಂಕಾ ವಂದಿಸಿದರು. ರಶ್ಮಿತಾ ನಿರೂಪಿಸಿದರು.