ಜಿಲ್ಲೆ

ನಾಯಿ ಹಿಡಿಯಲು ಹೋಗಿ ಬಾವಿಗೆ ಬಿದ್ದ ಚಿರತೆ

Uttara Kannada - Subash Hegde

ಕಾರವಾರ: ನಾಯಿ ಬೇಟೆಯಾಡಲು ಬಂದ ಚಿರತೆ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಗೋಪಿಶಿಟ್ಟಾ ಅರಣ್ಯ ವ್ಯಾಪ್ತಿಯ ಜರಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ರಮೇಶ ಗೋವೇಕರ್ ಅವರಿಗೆ ಸೇರಿದ ಕಟ್ಟೆ ಇರದ ತೆರೆದ ಬಾವಿಯಲ್ಲಿ ಭಾನುವಾರ ರಾತ್ರಿ ಚಿರತೆ ಬಿದ್ದಿದೆ. ಮನೆಯವರು ಹೋಗಿ ನೋಡಲು ಹೆದರಿದ್ದು, ಚಿರತೆ ಮೃತಪಟ್ಟಿದೆ. ಸೋಮವಾರ ಬೆಳಗ್ಗೆ ಅರಣ್ಯಾಧಿಕಾರಿಗಳು ಚಿರತೆ ಮೃತ ದೇಹ ಮೇಲೆತ್ತಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.