ಹೆಬ್ರಿ: ಪೆರ್ಡೂರು ಗ್ರಾಮದ ಪುತ್ತಿಗೆಯ ಕಲ್ಲಮಠದ ಜೀರ್ಣೋದ್ಧಾರಕ್ಕಾಗಿ ಭಾವಿ ಪರ್ಯಾಯ ಪೀಠಾಧಿಪತಿ ಶಿರೂರು ಮಠದ ವೇದವರ್ಧನ ಶ್ರೀಗಳ ಸಮ್ಮುಖದಲ್ಲಿ ನಿಧಿಕುಂಭ ಸ್ಥಾಪನೆಯೊಂದಿಗೆ ಶಿಲಾನ್ಯಾಸ ಇತ್ತೀಚೆಗೆ ನೆರವೇರಿತು.
ಪೆರ್ಡೂರು ಪುತ್ತಿಗೆ ಕಲ್ಲಮಠ ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಿರೂರು ಮಠದ ದಿವಾನ ಉದಯ ಕುಮಾರ್ ಸರಳತ್ತಾಯ, ಪೆರ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೇತನಾ ಶೆಟ್ಟಿ, ಪ್ರಮುಖರಾದ ಶ್ರೀಶ ಭಟ್ ಕಡೆಕಾರು, ದೇವು ಪೂಜಾರಿ, ಸತೀಶ್ ಹೆಗ್ಡೆ ಕುದ್ಮುಂಜೆ, ಸಾಯಿಷಾ ಸುಧಾಕರ ಶೆಟ್ಟಿ ಪೆರ್ಡೂರು, ರವಿ ಹೆಗ್ಡೆ, ಶಾಲಿನಿ ಶೆಟ್ಟಿ ಕದಿಕೆ, ರಾಘವೇಂದ್ರ ಆಚಾರ್ಯ, ಅನಂದ ಕುಲಾಲ್, ರಘು ನಾಯ್ಕ, ರಾಮ ಕುಲಾಲ್, ಸತೀಶ್ ಕೋಟ್ಯಾನ್, ನವೀನ್ ಸಾಲ್ಯಾನ್, ಜಯಶ್ರೀ ಕುಲಾಲ್ ಉಪಸ್ಥಿತರಿದ್ದರು. ರಾಧಾಕೃಷ್ಣ ಭಟ್ ಹಿರಿಯಡ್ಕ ಸ್ವಾಗತಿಸಿದರು. ರಕ್ಷಿತ್ ನಾಯ್ಕ ನಿರೂಪಿಸಿದರು. ಪರಿಮಳಾ, ಆಶಾ, ಮಂಜುನಾಥ ತೆಂಕಿಲಾಯ, ಹರೀಶ್ ಪೂಜಾರಿ, ಸುರೇಶ್ ನಾಯ್ಕ, ಶ್ರೀನಿವಾಸ ನಾಯ್ಕ, ಸದಾನಂದ ಶೆಟ್ಟಿ ಸಹಕರಿಸಿದರು.