ಜಿಲ್ಲೆ

ಕಾನೂನು ಕಾಲೇಜಿನ ಪ್ರೊಫೆಸರ್ ಕಗ್ಗೊಲೆ‌, ಅಳಿಯನಿಂದಲೇ ಕೃತ್ಯ?

ಹುಬ್ಬಳ್ಳಿ: ಕಾನೂನು ಕಾಲೇಜಿನ ಪ್ರೊಫೆಸರ್​ವೊಬ್ಬರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ‌

ಇಂದು(ಶನಿವಾರ) ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯ ಲಿಂಗರಾಜನಗರದ ಕಟ್ಟಿ ಮಂಗಳಮ್ಮ ದೇವಸ್ಥಾನ ಬಳಿಯ ನಿವಾಸದಲ್ಲಿ ನಿವೃತ್ತ ಪ್ರೊಫೆಸರ್​ ನೆತ್ತರು ಹರಿದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಗದಗದ ಕಾನೂನು ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಶಂಕ್ರಪ್ಪ ಮುಶನ್ನವರ ಕೊಲೆಯಾದವರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್​ ಆಗಿದ್ದ ಶಂಕ್ರಪ್ಪ ಮುಶನ್ನವರ ಅವರು ಇತ್ತಿಚೀಗೆ ನಿವೃತ್ತಿ ಪಡೆದು ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ಅಳಿಯನಿಂದಲೇ ಮಾವನ(ಶಂಕ್ರಪ್ಪ) ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ವಿದ್ಯಾನಗರ ಪೊಲೀಸರು, ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ರವಾನಿಸಿದರು.