ಜಿಲ್ಲೆ

ಸರ್ಕಾರಿ ಸವಲತ್ತು ಪಡೆದು ಸ್ವಾವಲಂಬನೆ: ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಕಿವಿಮಾತು

ಸೌಮ್ಯ ಆರ್

ಕಾಸರಗೋಡು: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿಗಳಿಂದ ಲಭ್ಯವಾಗುವ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಜನತೆ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಹೇಳಿದರು.

ಬೇಡಡ್ಕ ಗ್ರಾ.ಪಂ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಾರಿಗೆ ತಂದಿರುವ ಎಬಿಸಿಡಿ ಶಿಬಿರದ ಮೂಲಕ ಪರಿಶಿಷ್ಟ ಪಂಗಡದವರಿಗೆ ಮೂಲ ಅಧಿಕೃತ ದಾಖಲೆಗಳನ್ನು ತಯಾರಿಸಿ, ಅವುಗಳ ಡಿಜಿಟಲೀಕರಣದ ೋಷಣೆ ಹಾಗೂ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎಬಿಸಿಡಿ ಯೋಜನೆಯನ್ವಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಪಂಚಾಯಿತಿಯಲ್ಲಿರುವ 704 ಫಲಾನುಭವಿಗಳಿಗೆ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ಪಡಿತರ ಚೀಟಿ, ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳಲ್ಲಿ ಅಧಿಕೃತ ದಾಖಲೆಗಳನ್ನು ಹಸ್ತಾಂತರಿಸಲಾಯಿತು.

ಬೇಡಡ್ಕ ಗ್ರಾಪಂ ಅಧ್ಯಕ್ಷೆ ಎಂ.ಧನ್ಯ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಯೋಜನಾ ಸಂಯೋಜಕ ಕೆ.ಆರ್.ಸಂತೋಷ್ ವರದಿ ಮಂಡಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಎ.ಮಾಧವನ್, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವರದರಾಜ್, ಪಿ.ವಸಂತ ಕುಮಾರಿ, ಲತಾ ಗೋಪಿ, ಬ್ಲಾಕ್ ಪಂಚಾಯಿತಿ ಸದಸ್ಯೆ ಸಾವಿತ್ರಿ ಬಾಲನ್, ಪಂಚಾಯಿತಿ ಸದಸ್ಯೆ ಪಿ.ಶ್ರುತಿ, ಸಿ.ಡಿ.ಎಸ್. ಅಧ್ಯಕ್ಷೆ ಗುಲಾಬಿ, ಎಸ್.ಎಸ್.ಅನೀಶ್, ಕೆ.ವೀರೇಂದ್ರ ಕುಮಾರ್, ಜನಾರ್ದನನ್ ಉಪಸ್ಥಿತರಿದ್ದರು.

ಪ.ವರ್ಗ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆ.ಮೋಹನದಾಸ್ ಸ್ವಾಗತಿಸಿದರು. ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಎಂ.ಕೆ.ಪ್ರದೀಶ್ ವಂದಿಸಿದರು.