ಜಿಲ್ಲೆ

ಮಾಜಾಳಿ-ಬಾವಳ ರಸ್ತೆ ಕುಸಿತ

Uttara Kannada - Subash Hegde

ಕಾರವಾರ: ಮಾಜಾಳಿಯ ಬಾವಳದಲ್ಲಿ ಮೀನುಗಾರಿಕೆ ರಸ್ತೆ ಸಮುದ್ರ ಕೊರೆತದಿಂದ ಕೊಚ್ಚಿ ಹೋಗಿದೆ.
ಸುಮಾರು 300 ಮೀಟರ್ ಕುಸಿದಿದ್ದು, ಮಾಜಾಳಿ, ಬಾವಳ ನಡುವೆ ಬಸ್ ಸಂಚಾರ ಬಂದ್ ಆಗಿದ್ದು, ಶಾಲೆ, ಕಾಲೇಜ್ ಗಳ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು 3 ಕಿಮೀ ನಡೆಯಬೇಕಿದೆ.
ವಿದ್ಯುತ್ ಕಂಬಗಳು ಉರುಳಿ ಬೀಳುವ ಹಂತದಲ್ಲಿದ್ದು, ಸಾವಿರಾರು ಮನೆಗಳಿಗೆ ವಿದ್ಯುತ್ ವ್ಯತ್ಯಯವಾಗುವ ಆತಂಕದಲ್ಲಿದೆ.
ದೇವಬಾಗ ದಾಂಡೇಬಾಗ ನಡುವೆ ಮೀನುಗಾರಿಕೆ ಓಡಾಟಕ್ಕೂ ತೊಂದರೆಯಾಗಿದೆ ಎಂದು ಸ್ಥಳೀಯ ಆನಂದು ಸೈಲ್ ತಿಳಿಸಿದ್ದಾರೆ.‌
ತಹಸೀಲ್ದಾರ್ ನಿಶ್ಚಲ ನರೋನಾ, ಇಒ ಆನಂದಕುಮಾರ್ ಬಾಲಣ್ಣನವರ್, ಬಂದರು ಇಂಜಿನಿಯರ್ ಮಂಜುನಾಥ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌