ಸಂಡೂರು: ಜಿಂದಾಲ್ ಕಾರ್ಖಾನೆಗೆ ಸರ್ಕಾರ 3,667 ಎಕರೆ ಭೂಮಿ ಮಾರಾಟ ವಿರೋಧಿಸಿ ಡಿವೈಎಫ್‌ಐನಿಂದ ಹಮ್ಮಿಕೊಂಡಿದ್ದ ಬಳ್ಳಾರಿಯಿಂದ ತೋರಣಗಲ್‌ವರೆಗಿನ ಕಾಲ್ನಡಿಗೆ ಜಾಥಾ ಜೆಎಸ್‌ಡಬ್ಲ್ಯು ಕಾರ್ಖಾನೆ ಮುಂದೆ ಸಮಾರೋಪಗೊಂಡಿತು.
ಇದನ್ನು ಓದಿ: ಅಹಿಂದ ಕಾರ್ಯಕರ್ತರಿಂದ ಬೆಂಗಳೂರು ಜನಜಾಥಾ ಚಲೋ
ಸಮಿತಿಯ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರಿ ಮಾತನಾಡಿ, ಅತ್ಯಂತ ದುಬಾರಿ ಬೆಲೆಯ ಜಮೀನನ್ನು ಕಡಿಮೆ ದರಕ್ಕೆ ಜಿಂದಾಲ್‌ಗೆ ಮಾರಾಟ ಮಾಡಲು ಅನುಮೋದನೆ ನೀಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಳವಳಿ ಮತ್ತು ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕುಡತಿನಿಯ ಭೂ ಸಂತ್ರಸ್ತರು ಎರಡು ವಷರ್ಗಳಿಂದ ಹೋರಾಟ ಮಾಡುತ್ತಿದ್ದು, ಸರ್ಕಾರ ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ರಾಜ್ಯಾದಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಪಕ್ಷದಲ್ಲಿದ್ದಾಗ ಕಾಂಗ್ರೆಸ್ ಜಿಂದಾಲ್‌ಗೆ ಭೂ ಮಾರಾಟ ಮಾಡುವುದನ್ನು ವಿರೋಧಿಸಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಭೂಮಿ ಮಾರಾಟಕ್ಕೆ ನಿರ್ಣಯ ತೆಗೆದುಕೊಂಡಿರುವುದು ಸರಿಯಲ್ಲ ಎಂದರು.ಮುಖಂಡರಾದ ಬೈಲಾ ಹನುಮಪ್ಪ, ಜಿ.ಎನ್.ಎರ‌್ರಿಸ್ವಾಮಿ, ಎ.ತಿಪ್ಪೇರುದ್ರ, ಮಸ್ತಾನ್‌ಸಾಬ್, ಬಿಪಿ. ನವೀನ್, ಎಸ್.ಕಾಲೂಬಾ, ಜೆ.ಎಂ.ಚನ್ನಬಸಯ್ಯ, ಎ.ಸ್ವಾಮಿ, ಈಡಿಗರ ಮಂಜುನಾಥ ಸ್ವಾಮಿ, ತಿಪ್ಪೇಸ್ವಾಮಿ, ಎಚ್.ಎರ‌್ರಿಸ್ವಾಮಿ, ನಾಗಭೂಷಣ್ ಇತರರಿದ್ದರು.