ಧಾರಾಕಾರ ಮಳೆಯಿಂದ ಕುರೆಮಾಗನಹಳ್ಳಿ ಗ್ರಾಮದ ಕೆರೆ ಏರಿ ಒಡೆದಿರುವುದು.  
ಜಿಲ್ಲೆ

ಕೆರೆ ಏರಿ ಒಡೆದು ಜಮೀನುಗಳಿಗೆ ಹರಿದ ನೀರು

ಹರಪನಹಳ್ಳಿ: ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ ಕುರೆಮಾಗನಹಳ್ಳಿ ಗ್ರಾಮದ ಕೆರೆ ಏರಿ ಒಡೆದು ಜಮೀನುಗಳಿಗೆ ನುಗ್ಗಿದೆ. ಅಡಕೆ, ತೆಂಗು ಹಾಗೂ ಮೆಕ್ಕೆಜೋಳ ಬೆಳೆ ಜಲಾವೃತವಾಗಿ ಅಪಾರ ನಷ್ಟವಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ತಾತ್ಕಾಲಿಕವಾಗಿ ದುರಸ್ತಿ ಕೈಗೊಂಡಿದ್ದಾರೆ. ಆದರೆ, ಹೊಲಗಳಿಂದ ಮಣ್ಣನ್ನು ತೆಗೆದು ಕೆರೆ ಏರಿಗೆ ಅಡ್ಡಲಾಗಿ ತಡೆಗೋಡೆ ಕಟ್ಟುತ್ತಿದ್ದ ವೇಳೆ ಗೊಲ್ಲರಹಟ್ಟಿಯ ರೈತರು ಜೆಸಿಬಿಯನ್ನು ವಶಕ್ಕೆ ಪಡೆದು, ಕೆಲಸ ತಡೆಹಿಡಿದಿದ್ದಾರೆ ಎಂದು ಎಇಇ ಕುಬೇಂದ್ರನಾಯ್ಕ ತಿಳಿಸಿದರು.

ಚಿಕ್ಕಮೇಗಳಗೇರಿ ಹಾಗೂ ಹಿರೇಮೇಗಳಗೇರಿಯ ಕೆರೆ ಸಹ ತುಂಬಿ ಕೋಡಿ ಬಿದ್ದು ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದರಿಂದ ಒಣಗಿದು ಬೆಳೆಯು ಕೊಚ್ಚಿಕೊಂಡು ಹೋಗಿದೆ. ಪೋತಲಕಟ್ಟೆ, ಕರಡಿದುರ್ಗ, ಬೇವಿನಹಳ್ಳಿ, ದೊಡ್ಡ ತಾಂಡಾ, ಫಣಿಯಾಪುರ, ನಾಗತಿಕಟ್ಟೆಯಲ್ಲಿ ಹಳ್ಳಗಳು ತುಂಬಿ ಹರಿಯುತ್ತಿವೆ.