ಜಿಲ್ಲೆ

ನೋಟಿಸ್​​ ನೀಡಲು ಬಂದ ಮಹಿಳಾ ಪಿಎಸ್​​ಐ ಮೇಲೆ ಖಾರದ ಪುಡಿ ಎರಚಿ ಹಲ್ಲೆಗೆ ಯತ್ನ!

mahalakshmihm

ಬೀದರ್: ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್​​ಗೆ ನೋಟಿಸ್ ನೀಡಲು ಹೋದ ಮಹಿಳಾ ಪಿಎಸ್​​ಐ ಮೇಲೆ ಪುಂಡರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ತೋರಣ ಗ್ರಾಮದಲ್ಲಿ,  ರೌಡಿಶೀಟರ್​ಗೆ ನೊಟೀಸ್​ ನೀಡಲು ತೆರಳಿದ್ದ, ಕಮಲನಗರದ ಪಿಎಸ್​​ಐ ನಂದಿನಿ ಸೇರಿದಂತೆ ಮೂವರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ರೌಡಿಶೀಟರ್​ ಜತೆಗೆ ಆತನ ಸಹಚರರು ಸೇರಿ ಒಟ್ಟು  ಆರು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ದೊಣ್ಣೆ ಮಾತ್ರವಲ್ಲದೇ ಖಾರದಪುಡಿಯನ್ನೂ ಎರಚಿ ಪೊಲೀಸರಿಗೆ ಥಳಿಸಲು ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.

ರೌಡಿ ಶೀಟರ್ ಪಂಡರಿ ಎಂಬುವನಿಗೆ ನೋಟಿಸ್ ನೀಡಲು ಹೋಗಿದ್ದರು. ಈ ವೇಳೆ ಇನ್ನಿತರ ಆರು ಮಂದಿ ಸೇರಿ ಖಾರದ ಪುಡಿ ಎರಚಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)