ಜಿಲ್ಲೆ

ಯುವತಿಯ ಮೇಲೇ ಸಾಗಿದ ಕಾರು; ಸಾವಿನಿಂದಾಗಿ ಜನರ ಆಕ್ರೋಶ, ರಸ್ತೆಯಲ್ಲೇ ಬೆಂಕಿ ಹಚ್ಚಿ ಪ್ರತಿಭಟನೆ..

ರಾಮನಗರ: ಯುವತಿಯೊಬ್ಬಳ ಮೇಲೆಯೇ ಕಾರು ಸಾಗಿ ಸಂಭವಿಸಿದ ಅಪಘಾತದಲ್ಲಿ ಆಕೆ ಸಾವಿಗೀಡಾಗಿದ್ದು, ಉದ್ರಿಕ್ತ ಜನರು ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್​ಪೋಸ್ಟ್ ಬಳಿ ಈ ಅಪಘಾತ ಸಂಭವಿಸಿದೆ. ಈ ಪ್ರಕರಣದಲ್ಲಿ ರಘುನಾಥಪುರ ಗ್ರಾಮದ ಯುವತಿ ಚೇತನಾ (22) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಹಾಸನ ಹಾಗೂ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿವೃತ್ತ ಯೋಧರೊಬ್ಬರ ಕಾರು ಚೇತನಾಗಿ ಡಿಕ್ಕಿ ಹೊಡೆದು, ಆಕೆಯ ಮೇಲೇ ಹರಿದು ಹೋಗಿದ್ದರಿಂದ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಅಪಘಾತದ ಬಳಿಕ ಸ್ಥಳೀಯರು ಹೆದ್ದಾರಿಯಲ್ಲಿ ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಹೆದ್ದಾರಿಯವರು ಸೂಕ್ತ ನಿರ್ವಹಣೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರತಿಭಟನೆಯಿಂದಾಗಿ ಸುಮಾರು 2 ಗಂಟೆಗಳ ಕಾಲ ರಸ್ತೆ ತಡೆಯಾಗಿದ್ದು, ರಸ್ತೆಯ ಎರಡೂ ಕಡೆ ಕಿಲೋಮೀಟರ್​ಗಟ್ಟಲೆ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದು ಕಂಡು ಬಂತು. ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಈ ಅಪಘಾತ ಸಂಭವಿಸಿದೆ.