ಜಿಲ್ಲೆ

ಯುವತಿ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಿದಾತನಿಗೆ ಏನಾಯ್ತು?

Avinash R

ಉಪ್ಪಿನಂಗಡಿ: ಪೆರಿಯಡ್ಕ ಎಂಬಲ್ಲಿ ಯುವತಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯಿಂದ ನೋಡಲೆತ್ನಿಸಿದ ಕಾಮಾಂಧನೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪೆರಿಯಡ್ಕದ ನಿವಾಸಿ ಅಬ್ದುಲ್ ರಹಿಮಾನ್(41) ಬಂಧಿತ. ಈತ ವಿವಾಹಿತನಾಗಿದ್ದು, 16 ಹಾಗೂ 9 ವರ್ಷದ ಇಬ್ಬರು ಮಕ್ಕಳ ತಂದೆಯಾಗಿದ್ದಾನೆ.

ಕಿಟಕಿಯ ಬಾಗಿಲನ್ನು ಸರಿಸಲು ಯತ್ನಿಸಿದ್ದ ವೇಳೆ ಉಂಟಾದ ಶಬ್ದದಿಂದ ಸಂಶಯಗೊಂಡ ಯುವತಿ ತನ್ನ ತಾಯಿಗೆ ಮಾಹಿತಿ ನೀಡಿ ತಾಯಿ ಪರಿಶೀಲಿಸಿದಾಗ ಪರಾರಿಯಾಗುತ್ತಿದ್ದ ಅಬ್ದುಲ್ ರಹಿಮಾನ್‌ನನ್ನು ಗುರುತಿಸಿದ್ದರು. ಈ ವೇಳೆ ಸಹಾಯಕ್ಕಾಗಿ ಬೊಬ್ಬೆ ಹೊಡೆದಾಗ ಜಮಾಯಿಸಿದ ಸ್ಥಳೀಯರಿಗೆ ಮಾಹಿತಿ ನೀಡಿ, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಗೊಪ್ಪಿಸಿದರು.

ಇಣುಕಿ ನೋಡಿದಾತನಿಂದಲೇ ನಾಟಕ..!

ಪರಾರಿಯಾಗುತ್ತಿದ್ದ ತನ್ನನ್ನು ಯಾರೂ ನೋಡಿಲ್ಲ ಎಂದು ಭಾವಿಸಿ, ಯುವತಿಯ ತಾಯಿ ಬೊಬ್ಬೆ ಹೊಡೆದಾಗ, ತಾನೇ ಮನೆಗೆ ಮೊದಲಾಗಿ ಧಾವಿಸಿ ಬಂದ ಅಬ್ದುಲ್ ರಹಿಮಾನ್ ಏನಾಯಿತ್ತಕ್ಕ ? ಬಾಗಿಲು ತೆರೆಯಿರಿ ಎಂದು ಸುಭಗನಂತೆ ನಟಿಸಿದ್ದ. ಈತನ ಬಗ್ಗೆ ಪ್ರಾರಂಭದಿಂದಲೂ ಸ್ಥಳೀಯರಿಗೆ ಸಂಶಯವಿದ್ದ ಕಾರಣಕ್ಕೆ ಆತನ ಮೇಲೆ ಪರಿಸರದ ಜನತೆ ನಿಗಾ ಇರಿಸಿದ್ದರು.