ಜಿಲ್ಲೆ

ಎಲ್ ಬೋರ್ಡ್ ಚಾಲಕನ ಅಜಾಗರೂಕತೆಯಿಂದ ಆಸ್ಪತ್ರೆ ಸೇರಿದರು ಇಬ್ಬರು ಮಹಿಳೆಯರು

reportermys

ಹಾಸನ: ಕಾರು ಚಾಲನೆಯನ್ನು ಕಲಿಯುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಇಬ್ಬರು ಮಹಿಳೆಯರಿಗೆ ಡಿಕ್ಕಿ ಹೊಡೆದು ನಂತರ ಮರಕ್ಕೆ ಗುದ್ದಿರುವ ಘಟನೆ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ.

ಭಾನುವಾರ ಕ್ರೀಡಾಂಗಣದಲ್ಲಿ ಮಹಿಳೆ ಕಾರು ಓಡಿಸುವುದನ್ನು ಕಲಿಯುತ್ತಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ದನ ಮೇಯ್ಯಿಸುತ್ತ ಕುಳಿತಿದ್ದ ಮಹಿಳೆಯರಿಗೆ ಡಿಕ್ಕಿ ಹೊಡೆದು ಮರಕ್ಕೆ ಗುದ್ದಿದ್ದು ಈ ಸಂದರ್ಭದಲ್ಲಿ ಕಾರು ಡಿಕ್ಕಿಯಾಗುವುದನ್ನು ತಪ್ಪಿಕೊಳ್ಳಲು ಹೋಗಿ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದಿದ್ದರಿಂದ ಸಣ್ಣಪುಟ್ಟ ಗಾಯಾಳಾಗಿವೆ.

ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.