ಕುಷ್ಟಗಿಯ ತಹಸಿಲ್ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಶೌಚಗೃಹವನ್ನು ತಹಸೀಲ್ದಾರ್ ಮುರುಳೀಧರ್ ಗುರುವಾರ ಉದ್ಘಾಟಿಸಿದರು. 
ಜಿಲ್ಲೆ

ಮರ್ಯಾದೆ ಮನೆ ಉದ್ಘಾಟಿಸಿದ ತಹಸೀಲ್ದಾರ್

ಕುಷ್ಟಗಿ: ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿರುವ ಶೌಚಗೃಹವನ್ನು ತಹಸೀಲ್ದಾರ್ ಮುರುಳೀಧರ್ ಗುರುವಾರ ಉದ್ಘಾಟಿಸಿದರು. ಇದನ್ನು ನಿರ್ಮಿಸಿ ಹಲವು ದಿನಗಳಾದರೂ ಉದ್ಘಾಟಿಸಿರಲಿಲ್ಲ.

ಶೌಚಗೃಹ ಇಲ್ಲದೆ ಕಚೇರಿಗೆ ಬರುವ ಸಾರ್ವಜನಿಕರು ಎದುರಿಸುತ್ತಿದ್ದ ತೊಂದರೆ ಕುರಿತು ‘ಮರ್ಯಾದೆ ಮನೆಗಿಲ್ಲ ಉದ್ಘಾಟನೆ ಭಾಗ್ಯ’ ಶೀರ್ಷಿಕೆಯಡಿ ಜು.20ರಂದು ವಿಜಯವಾಣಿಯಲ್ಲಿ ವಿಸ್ತತ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಶೌಚಗೃಹ ನಿರ್ಮಾಣ ನಂತರ ನೀರು ಪೂರೈಕೆ ಮಾಡಿ ತಹಸಿಲ್ ಕಚೇರಿಗೂ ಹಸ್ತಾಂತರ ಮಾಡಲಾಗಿತ್ತು ಆದರೆ ಆರಂಭಿಸಿರಲಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ತಿಳಿಸಿದ್ದಾರೆ. ಸಮಸ್ಯೆ ಕುರಿತು ಬೆಳಕು ಚೆಲ್ಲಿದ ವಿಜಯವಾಣಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.