ಕುಂಟಿಕಾನಮಠದಲ್ಲಿ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ದೃಢಕಲಶಾಭಿಷೇಕ ನಡೆಯಿತು. 
ಜಿಲ್ಲೆ

ಕುಂಟಿಕಾನಮಠದಲ್ಲಿ ದೃಢಕಲಶ

ಸೌಮ್ಯ ಆರ್

ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ ದೃಢಕಲಶಾಭಿಷೇಕ ಜರುಗಿತು.

ಮಂಗಳವಾರ ಸಂಜೆ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ನಡೆಯಿತು.

ಬುಧವಾರ ಬೆಳಗ್ಗೆ ದೇಲಂಪಾಡಿ ಗಣೇಶ ತಂತ್ರಿನೇತೃತ್ವದಲ್ಲಿ ಗಣಪತಿಹೋಮ, ದೃಢಕಲಶ ಪೂಜೆ, ಶ್ರೀ ಅನ್ನಪೂರ್ಣೇಶ್ವರೀ ದೇವಿ, ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳು ಮತ್ತು ಶ್ರೀ ಶಂಕರನಾರಾಯಣ ದೇವರಿಗೆ ದೃಢಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು.

ಇದೇ ಸಂದರ್ಭ ರಾಜ್ಯಮಟ್ಟದ ಸಾಧಕಿ ಅನ್ವಿತಾ ತಲ್ಪಣಾಜೆ ಅವರಿಂದ ಭಕ್ತಿಗೀತೆ ಕಾರ್ಯಕ್ರಮ ಜರುಗಿತು. 2024 ಏಪ್ರಿಲ್ 21ರಿಂದ ಏ.30ರ ತನಕ ಬ್ರಹ್ಮಕಲಶೋತ್ಸವ ಜರುಗಿತ್ತು.