ಜಿಲ್ಲೆ

ಕುಣಿತ ಭಜನಾ ಸ್ಪರ್ಧೆಗೆ ತಂಡಗಳ ಆಹ್ವಾನ

ಗುರುಪುರ: ಕುತ್ತೆತೂರು-ಸೂರಿಂಜೆ ಶ್ರೀ ಪೊನ್ನಗಿರಿ ಭಜನಾ ಸಪ್ತಾಹ ಅಮೃತ ಮಹೋತ್ಸವ ಸಮಿತಿ ಆಶ್ರಯದಲ್ಲಿ 75ನೇ ಭಜನಾ ಮಂಗಳೋತ್ಸವ ಪ್ರಯುಕ್ತ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ಕುಣಿತ ಭಜನಾ ತಂಡಗಳಿಗೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನವಂಬರ್ 9ರಂದು ಅಂತರ್ ಜಿಲ್ಲಾ ಕುಣಿತ ಭಜನೆ ಸ್ಪರ್ಧೆ ನಡೆಯಲಿದೆ.

15 ವರ್ಷದೊಳಗಿನ ಬಾಲಕ-ಬಾಲಕಿಯರ ವಿಭಾಗ ಹಾಗೂ ಮಹಿಳೆಯರಿಗೆ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ದಾಸರ ಕೀರ್ತನೆ ಮಾತ್ರ ಹಾಡುವುದು ಮತ್ತು ಅಂಕಿತನಾಮ ಕಡ್ಡಾಯಗೊಳಿಸಲಾಗಿದೆ. ಒಟ್ಟು 12 ತಂಡಗಳಿಗೆ ಅವಕಾಶ ಇದೆ. ಭಾಗವಹಿಸುವ ತಂಡಗಳು ಅಕ್ಟೋಬರ್ 31ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಸ್ಪರ್ಧೆಯ ದಿನದಂದು ಬೆಳಗ್ಗೆ 8.30ಕ್ಕೆ ಸ್ಪರ್ಧಾ ತಂಡಗಳು ಪೊನ್ನಗಿರಿಯಲ್ಲಿ ಹಾಜರಿರಬೇಕು. ಸಂಜೆ 5ರಿಂದ ‘ನಲಿದರೆ ಒಲಿವ’ ನೃತ್ಯ ಭಜನಾ ಸಂಭ್ರಮ ನಡೆಯಲಿದೆ ಎಂದು ಶ್ರೀ ಪೊನ್ನಗಿರಿ ಭಜನಾ ಸಪ್ತಾಹ ಅಮೃತ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.