ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಂಗಲ್ಪಾಡಿ-ಕುಂಬಳೆ ಸಿಪಿಎಂನಲ್ಲಿ ಸಾಮೂಹಿಕ ರಾಜೀನಾಮೆ ಪರ್ವ ನಡೆದಿದೆ. ಸಿಐಟಿಯು ಮುಖಂಡ ಸೇರಿದಂತೆ 11 ಮಂದಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಕಾಸರಗೋಡು ಡಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸಿದರು. ಸಿಐಟಿಯು ಏರಿಯಾ ಜತೆಕಾರ್ಯದರ್ಶಿ ಹಾಗೂ ಜನರಲ್ ವರ್ಕರ್ಸ್ ಯೂನಿಯನ್ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಫಾರೂಕ್ ಶಿರಿಯ ನೇತೃತ್ವದಲ್ಲಿ ಸಿಪಿಎಂ ತೊರೆದು ಕಾಂಗ್ರೆಸ್ ಸೇರಿದರು. ಅಶ್ರಫ್ ಮುಟ್ಟಂ, ಲತೀಫ್ ಪಿ.ಕೆ.ನಗರ, ರಿಯಾಝ್ ಅಲ್ಕೋಟ್, ಬಶೀರ್, ಜಾವೇದ್ ಮಟ್ಟಂ, ಜಾಫರ್ ತಂಗಳ್, ಅಬ್ದುಲ್ಲ ಪಂಜತೊಟ್ಟಿ, ಲತೀಫ್ ಶಿರಿಯ, ಯೂಸುಫ್ ಓನಂದೆ ಮತ್ತು ಹನೀಫ್ ಶಿರಿಯ ಕಾಂಗ್ರೆಸ್ ಸೇರಿದ ಇತರರು.