ಕುಂಬ್ಡಾಜೆ ಗ್ರಾಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕುಂಬ್ಡಾಜೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ರೈ, ಹರೀಶ್ ನಾರಂಪಾಡಿ, ಗಂಗಾದರ ರೈ ಮಠದಮೂಲೆ, ಚಿದಾನಂದ ರೈ ಇದ್ದರು. 
ಜಿಲ್ಲೆ

ಕುಂಬ್ಡಾಜೆ ಗ್ರಾಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ: ಕುಂಬ್ಡಾಜೆ ಬಂಟರ ಸಂಘದ ನೇತೃತ್ವದಲ್ಲಿ ಜುಲೈ 7 ರಂದು ನಡೆಯುವ ಸಾರ್ವಜನಿಕ ಕೆಸರು ಗದ್ದೆ ಕ್ರೀಡಾಕೂಟ ಕುಂಬ್ಡಾಜೆ ಗ್ರಾಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾರ್ಪನಡ್ಕದಲ್ಲಿ ಜರುಗಿತು.

ಕುಂಬ್ಡಾಜೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ರೈ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮೋಕ್ತೇಸರ ಶ್ಯಾಮ್ ಭಟ್ ಉದ್ಘಾಟಿಸಿದರು. ಶ್ರೀ ಗೋಪಾಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಹರೀಶ್ ನಾರಂಪಾಡಿ, ಗಂಗಾಧರ ರೈ ಮಠದಮೂಲೆ, ಚಿದಾನಂದ ರೈ, ಯಶೋದ, ಸುನಿತಾ ರೈ, ರಮೇಶ್ ಕೃಷ್ಣ ಪದ್ಮಾರು, ಗೋಪಾಲಕೃಷ್ಣ, ರೋಶಿಣಿ, ರಾಮಣ್ಣ ರೈ, ಬಾಲಕೃಷ್ಣ ಕೆ.ಕೆ, ಜಯರಾಜ್ ಕುಣಿಕುಳ್ಳಾಯ ಉಪಸ್ಥಿತರಿದ್ದರು. ಅಮೃತ್ ರಾಜ್ ರೈ ಸ್ವಾಗತಿಸಿ, ನವೀನ್ ರೈ ಪುತ್ರಕಳ ವಂದಿಸಿದರು. ಹರ್ಷಕುಮಾರ್ ರೈ ನಿರೂಪಿಸಿದರು.