ಕಿನ್ನಿಗೋಳಿ: ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠಾಪನೆ, ಕುಂಭ ಮೇಳ ಸಂಪನ್ನಗೊಂಡ ಸತ್ಕಾಲದಲ್ಲಿ ನಾವಿರುವುದೇ ಭಾಗ್ಯ. ದೈವಾರಾಧನೆಯ ಕುರಿತು ಯುವಜನಾಂಗಕ್ಕೆ ಆಸಕ್ತಿ ಹೆಚ್ಚಿದೆ ಎಂದು ಡಾ. ಅರುಣ್ ಉಳ್ಳಾಲ್ ಹೇಳಿದರು.
ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದೈವಾರಾಧನೆ ಬಗ್ಗೆ ಸಿನಿಮಾ, ರಂಗಭೂಮಿಗಳಲ್ಲಿ ಬರುವಾಗ ನಡೆಯುತ್ತಿರುವ ಚರ್ಚೆ ಗಮನಿಸುವಾಗ ಇವತ್ತಿನ ಯುವಕರ ಮನಸ್ಥಿತಿಯ ಬದಲಾವಣೆ ಕಾಣಬಹುದು. ಕೋಟಿಗಟ್ಟಲೆ ಖರ್ಚು ಮಾಡಿ ದೇವಸ್ಥಾನ ದೈವಸ್ಥಾನ ಕಟ್ಟುವ ಕೆಲಸದ ಜತೆಗೆ ಜನ ಬರುವಂತೆಯೂ ಆಗಬೇಕು. ಇಲ್ಲದಿದ್ದರೆ ಬೇಲೂರು ಹಳೇಬೀಡಿನ ದೇವಸ್ಥಾನಗಳಂತೆ ಟೂರಿಸ್ಟ್ ಸ್ಥಳಗಳಾಗಬಹುದು ಎಂದರು.
ವಿದ್ವಾಂಸ ಕಡಂದಲೆ ಸ್ಕಂದ ಪ್ರಸಾದ ಭಟ್ ಮಾತನಾಡಿದರು. ಸಾಧಕರಾದ ಪ್ರಕಾಶ್ ಆಚಾರ್, ಕಾವ್ಯಾ ಉಲ್ಲಂಜೆ, ಮೇಘಾ ಶೆಟ್ಟಿ ಕೆ.ಜಿ.ಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಮಾಜಿ ಸಚಿವ ನಾಗರಾಜ ಶೆಟ್ಟಿ, ಡಾ. ಶಶಿಕುಮಾರ್, ಕೊಡೆತ್ತೂರು ವೇದವ್ಯಾಸ ಉಡುಪ, ಚರಣ್ ಶೆಟ್ಟಿ, ಲೋಕಯ್ಯ ಸಾಲ್ಯಾನ್, ಪುರುಷೋತ್ತಮ ಶೆಟ್ಟಿ, ಮೋಹನ ಶೆಟ್ಟಿ, ಯೋಗೇಂದ್ರ ಗೌಡ, ಶಿವಾನಂದ, ಲೋಕೇಶ್ ಶೆಟ್ಟಿ, ದಿವಾಕರ ಶೆಟ್ಟಿ ಕೆ.ಜಿ.ಬೆಟ್ಟು, ಸಿ.ಎ. ಶರತ್ ಶೆಟ್ಟಿ, ಮುಂಬೈ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರೀತಿಕಾ ಮತ್ತು ವರ್ಷ ಸನ್ಮಾನಪತ್ರ ವಾಚಿಸಿದರು. ದೇವಿಪ್ರಸಾದ ಶೆಟ್ಟಿ ಸ್ವಾಗತಿಸಿದರು. ಮೇಘಾ ಶೆಟ್ಟಿ ನಿರೂಪಿಸಿದರು.