ಜಿಲ್ಲೆ

ಕುಲಾಲ ಸಂಘ ಮಹಾಸಭೆ

Avinash R

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಕುಂಜತ್ತೂರು ಇದರ 40ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜಿಲ್ಲಾ ಕುಲಾಲ ಸಮುದಾಯ ಭವನ ತೂಮಿನಾಡು ಕುಂಜತ್ತೂರಿನಲ್ಲಿ ಜರುಗಿತು.

ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ವಕೀಲ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಲಾಲ ಸಂಘದ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಜಿಲ್ಲಾ ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಸಂಘದ ಕೋಶಾಧಿಕಾರಿ ಬಾಲಕೃಷ್ಣ ದೀಕ್ಷಾ ಉಪಸ್ಥಿತರಿದ್ದರು.

ದಾಮೋದರ ಮಾಸ್ತರ್ ಕಬ್ಬಿನಹಿತ್ಲು 2023-24ನೇ ಸಾಲಿನ ವರದಿ ವಾಚನ ಹಾಗೂ ಈಶ್ವರ್ ಕಣ್ವತೀರ್ಥ 2023-24 ಸಾಲಿನ ಲೆಕ್ಕಪತ್ರ ಮಂಡಿಸಿದರು. ಸಂಘಟನಾ ಸಂಚಾಲಕ ಸುಧೀರ್ ರಂಜನ್ ದೈಗೋಳಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು ವಂದಿಸಿದರು. ರಶ್ಮಿತಾ ಹಾಗೂ ಭುವಿ ಪ್ರಾರ್ಥನೆಗೈದರು.