ಕುಕನೂರು ತಾಲೂಕಿನ ಭಾನಾಪುರದಲ್ಲಿ ಜಡಿಸಿದ್ಧೇಶ್ವರ ಲಘು ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಪ್ರಮುಖರಾದ ವಿಶ್ವನಾಥಯ್ಯ ಎನ್.ಮಠದ, ವಿರುಪಾಕ್ಷಯ್ಯ, ಚಿಂದಾನದಸ್ವಾಮಿ ಮಠದ, ಬಸವರಾಜ, ಸಾಯಿಪ್ರಕಾಶ ಮಠದ ಇತರರಿದ್ದರು. 
ಜಿಲ್ಲೆ

ಜಡಿಸಿದ್ಧೇಶ್ವರ ಲಘು ರಥೋತ್ಸವ ಅದ್ದೂರಿ

ಕುಕನೂರು: ತಾಲೂಕಿನ ಭಾನಾಪುರ ಗ್ರಾಮದ ದಿ.ನಾಗಯ್ಯ ಮಠದ ಅವರ ತೋಟದಲ್ಲಿ ಜಡಿಸಿದ್ಧೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಲಘು ರಥೋತ್ಸವ ಸೋಮವಾರ ಅದ್ದೂರಿಯಾಗಿ ನಡೆಯಿತು. ಜಡಿಸಿದ್ಧೇಶ್ವರ ಅಜ್ಜನ ಗದ್ದುಗೆಗೆ ಬೆಳಗ್ಗೆ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಯಿತು. ಸಂಜೆ ಲಘು ರಥೋತ್ಸವಕ್ಕೆ ಭಕ್ತರು ಉತ್ತತ್ತಿ, ಹಣ್ಣು ಎಸೆದು ಭಕ್ತಿ ಮೆರೆದರು. ಮಹಾದಾಸೋಹ ನೂರಾರು ಭಕ್ತರು ಸಾಕ್ಷಿಯಾದರು.

ಪ್ರಮುಖರಾದ ವಿಶ್ವನಾಥಯ್ಯ ಎನ್.ಮಠದ, ವಿರುಪಾಕ್ಷಯ್ಯ, ಚಿಂದಾನದಸ್ವಾಮಿ ಮಠದ, ಬಸವರಾಜ, ಶಿವಾನಂದಯ್ಯ ಮಠದ, ಮಂಜುನಾಥ ಗೊಂಡಬಾಳ, ಸಾಯಿಪ್ರಕಾಶ ಮಠದ, ವಿವೇಕ, ಚಂದ್ರು ಮಠದ, ವಿರುಪಾಕ್ಷಯ್ಯ ಮಠದ, ಪವನ, ರೇಣುಕಾ ಕುಂಬಾರ, ಶ್ರೀಶೈಲ ಮಠದ ಇತರರಿದ್ದರು.