ಜಿಲ್ಲೆ

ಉತ್ತಮ ಕಾರ್ಯಕ್ರಮದಿಂದ ಜಿಲ್ಲೆಗೆ ಕೀರ್ತಿ

ಇಂದಿರಾ ಎನ್ ಕೆ

ಹೆಬ್ರಿ: ಶ್ರೀ ಅನಂತ ಪದ್ಮನಾಭ ಫ್ರೆಂಡ್ಸ್ ಸಂಘಟನೆ ನಾಲ್ಕು ದಿನದ ಸಂಭ್ರಮದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಸಂಘಟಕರ ಕಾರ್ಯ ಶ್ಲಾಘನೀಯ. ಜಿಲ್ಲೆಗೆ ಈ ಉತ್ಸವ ಕೀರ್ತಿ ತರಲಿ ಎಂದು ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್ ಹೇಳಿದರು.

ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ವಠಾರದಲ್ಲಿ ಹೆಬ್ರಿ ಶ್ರೀ ಅನಂತ ಪದ್ಮನಾಭ ಫ್ರೆಂಡ್ಸ್ ಆಶ್ರಯದಲ್ಲಿ ಆಯೋಜಿಸಲಾದ ಹೆಬ್ಬೇರಿ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಶ್ರೀ ಅನಂತ ಪದ್ಮನಾಭ ದೇವಸ್ಥಾನ ತಂತ್ರಿ ಪ್ರೇಮಚಂದ್ರ ಐತಾಳ್ ಮಾತನಾಡಿದರು. ಹೆಬ್ರಿ ಶ್ರೀ ರಾಮ್ ಜುವೆಲರ್ಸ್ ಮಾಲೀಕ ನಾರಾಯಣ ಕೆ. ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಡಾ.ಪ್ರದೀಪ್ ಕುಮಾರ್, ಸಂಘಟಕ ಶೇಖರ್ ಉಪಸ್ಥಿತರಿದ್ದರು. ಶೇಖರ್ ಸ್ವಾಗತಿಸಿದರು. ನಿತ್ಯಾನಂದ ಶೆಟ್ಟಿ ವಂದಿಸಿದರು. ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹೆಬ್ರಿ ಬಂಟರ ಭವನದಿಂದ 20ಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ಭಜನಾ ತಂಡಗಳಿಂದ ಪುರಮೆರವಣಿಗೆ ಸಾಗಿ ಬಂತು.