ಕೂಡ್ಲಿಗಿಯಲ್ಲಿ ತಹಸೀಲ್ದಾರ್ ಟಿ.ಜಗದೀಶ್‌ಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ 50 ಸಾವಿರ ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು. ತಾಪಂ ಇಒ ವೈ.ರವಿಕುಮಾರ್, ಪ್ರಶಾಂತ ಸಾಗರ ಸ್ವಾಮಿಜೀ, ಮುಖಂಡರಾದ ಕಾವಲಿ ಶಿವಪ್ಪನಾಯಕ, ಸಾವಜ್ಜಿ ರಾಜೇಂದ್ರ ಇದ್ದರು. 
ಜಿಲ್ಲೆ

ಸಿಎಂ ಪರಿಹಾರ ನಿಧಿಗೆ 50 ಸಾವಿರ ರೂ.

ಕೂಡ್ಲಿಗಿ: ರಾಜ್ಯದ ಬಹುತೇಕ ತಾಲೂಕಿನಲ್ಲಿ ಬರದ ಛಾಯೆ ಇದೆ. ಹೀಗಾಗಿ ವೈಯಕ್ತಿಕವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಸಾವಿರ ರೂ. ನೀಡಿದ್ದೇನೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ.ಜಗದೀಶ್‌ಗೆ ಚೆಕ್ ಹಸ್ತಾಂತರಿಸಿ ಮಾತನಾಡಿದರು.

ಪ್ರಸಕ್ತ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಕೂಡ್ಲಿಗಿ ತಾಲೂಕು ಸೇರಿದಂತೆ ರಾಜ್ಯದ ಹಲವೆಡೆ ಬರ ಎದುರಾಗಿದೆ. ರೈತರು ಬಿತ್ತಿದ ಜೋಳ, ಮೆಕ್ಕೆಜೋಳ, ಶೇಂಗಾ, ರಾಗಿ, ಸಜ್ಜೆ, ಹತ್ತಿ ಒಣಗುತ್ತಿದೆ. ಮುಂಬರುವ ದಿನಗಳಲ್ಲಿ ಜನ, ಜಾನುವಾರುಗಳಿಗೆ ಕುಡಿವ ನೀರಿಗೂ ಸಮಸ್ಯೆ ಎದುರಾಗವ ಲಕ್ಷಣಗಳು ಕಾಣುತ್ತಿವೆ.

ಆ ಕಾರಣಕ್ಕೆ ಕೂಡ್ಲಿಗಿ ಕ್ಷೇತ್ರದ ಪರಿಸ್ಥಿತಿ ಅವಲೋಕಿಸಿ ಈಗಾಗಲೇ ಬರ ಪಟ್ಟಿಯಲ್ಲಿ ಕೂಡ್ಲಿಗಿ ತಾಲೂಕನ್ನು ಸೇರಿಸುವಂತೆ ಸಿಎಂ ಅವರಿಗೆ ಕೋರಲಾಗಿದೆ. ರೈತರ ಬವಣೆ ಅರಿತು ನನ್ನ ವೇತನದ 50 ಸಾವಿರ ರೂ. ಅನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ ಎಂದು ತಿಳಿಸಿದರು.