ಬೆಂಗಳೂರು: ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡು ಬಸ್ಗಳಲ್ಲಿ ಇತ್ತೀಚೆಗೆ ಪ್ರಯಾಣಿಸಿದವರ ಪೈಕಿ ಇಬ್ಬರಿಗೆ ಸೋಂಕು ಇರುವುದು ಧೃಡವಾಗಿದ್ದು, ಉಳಿದ ಪ್ರಯಾಣಿಕರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ದಾವಣಗೆರೆಗೆ ಮಾರ್ಚ್ 18ರಂದು ರಾಜಹಂಸ ಬಸ್(KA57 F 3802)ನಲ್ಲಿ ಸಂಚರಿಸಿದ್ದ ಪ್ರಯಾಣಿಕರೊಬ್ಬರಿಗೆ ಸೋಂಕು ಇದ್ದುದು ಖಚಿತವಾಗಿದೆ. ಅದೇ ರೀತಿ ಮಾರ್ಚ್ 21ರಂದು ಸಂಜೆ 4.30ಕ್ಕೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರಿಗೆ ತೆರಳಿದ್ದ ಕರ್ನಾಟಕ ಸಾರಿಗೆ ಬಸ್(KA19 F 3329)ನಲ್ಲಿ ಪ್ರಯಾಣಿಸಿದ್ದವರ ಪೈಕಿ ಒಬ್ಬರಿಗೆ ಸೋಂಕು ಇದ್ದುದು ಧೃಡಪಟ್ಟಿದೆ.
ಹೀಗಾಗಿ ಈ ಬಸ್ಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಕೂಡಲೇ ಸಮೀಪದ ಜಿಲ್ಲಾ ಆಸ್ಪತ್ರೆಗೆ ತೆರಳಿ ಬಸ್ನಲ್ಲಿ ಸಂಚರಿಸಿದ್ದ ವಿವರ ತಿಳಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.