ಗಂಗಾವತಿ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಯಾದವ ಸಮಾಜ ತಾಲೂಕು ಘಟಕದಿಂದ ಹಮ್ಮಿಕೊಂಡ ಶ್ರೀ ಕೃಷ್ಣ ಜಯಂತ್ಯುತ್ಸವ ನಿಮಿತ್ತ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಮಾಜಿ ಶಾಸಕ ಪರಣ್ಣಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಯಾದವ್ ಸಮಾಜದ ತಾಲೂಕಾಧ್ಯಕ್ಷ ಹನುಮೇಶ ಯಾದವ್ ಇತರರಿದ್ದರು. 
ಜಿಲ್ಲೆ

ಕೃಷ್ಣನ ಉಪದೇಶ ಬದುಕಿಗೆ ದಾರಿ ದೀಪ

Kopala - Desk - Eraveni

ಗಂಗಾವತಿ: ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಯಾದವ ಸಮಾಜ ತಾಲೂಕು ಘಟಕದಿಂದ ಶ್ರೀಕೃಷ್ಣ ಜಯಂತ್ಯುತ್ಸವ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಎಲ್ಲ ಕಾಲಕ್ಕೂ ಗೀತಸಾರ ಮೌಲ್ಯಯುತವಾಗಿದ್ದು, ಪ್ರತಿಯೊಂದು ಸಂದೇಶ ಅರ್ಥಪೂರ್ಣ ಮತ್ತು ಬದುಕಿಗೆ ದಾರಿ ದೀಪ. ಸ್ವಾಭಿಮಾನದ ಯಾದವ ಸಮುದಾಯ ಶಿಕ್ಷಣ ಸೇರಿ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಬೇಕಿದೆ ಎಂದರು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಶ್ರೀಕೃಷ್ಣನ ಉಪದೇಶ ಸಾಮರಸ್ಯದ ಬದುಕಿಗೆ ಶ್ರೇಷ್ಟವಾಗಿದ್ದು, ಎಲ್ಲ ವಿಧದಿಂದಲೂ ಉಪದೇಶಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಈ.ಧನರಾಜ್ ಉಪನ್ಯಾಸ ನೀಡಿದರು. ಯಾದವ್ ಸಮುದಾಯದ ಜನಪ್ರತಿನಿಧಿಗಳು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭಾವಚಿತ್ರವನ್ನು ನಗರದಾದ್ಯಂತ ಮೆರವಣಿಗೆ ಮಾಡಲಾಯಿತು.

ಯಾದವ ಸಮಾಜದ ತಾಲೂಕಾಧ್ಯಕ್ಷ ಹನುಮೇಶ ಯಾದವ್, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ವಿವಿಧ ಸಮಾಜದ ಮುಖಂಡರಾದ ಜೋಗದ ಹನುಮಂತಪ್ಪ ನಾಯಕ, ಗೌಳಿ ರಮೇಶ, ವೀರಭದ್ರಪ್ಪ ನಾಯಕ, ಸೈಯ್ಯದ್‌ಅಲಿ, ಪದಾಧಿಕಾರಿಗಳಾದ ಎ.ಆರ್.ಕೃಷ್ಣ, ಹನುಮಂತಪ್ಪ ಮಾಂಬಳ್ಳಿ, ಬಸಣ್ಣ ಸಪ್ರಿ, ಹುಲುಗಪ್ಪ, ಹನುಮಂತಪ್ಪ ಚಿಂಚಲಿ, ನಾಗಪ್ಪ ಹಳೇಕುಮಟಾ, ಹನುಮಂತಪ್ಪ ಕತ್ತಿ, ಹೇಮಣ್ಣ, ನಿಂಗಪ್ಪ, ಗೋವಿಂದಪ್ಪ ಸಾಯಿನಗರ, ಪಂಪಾಪತಿ ಮಲ್ಲಾಪುರ, ಅಯ್ಯಪ್ಪ ಯಾದವ್, ಕೀರಪ್ಪ ಮಲ್ಲಾಪುರ ಇತರಿರದ್ದರು.