ಕೋಟದ ಸೇವಾ ಸಂಗಮ ಶಿಶುಮಂದಿರದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶಿವರಾಮ ಉಡುಪ, ಸಂತೋಷ್ ಪ್ರಭು, ಭಾಗ್ಯವಾದಿರಾಜ್, ಗೀತಾ ಆನಂದ್ ಸಿ. ಕುಂದರ್ ಉಪಸ್ಥಿತರಿದ್ದರು 
ಜಿಲ್ಲೆ

ಮಕ್ಕಳಲ್ಲಿ ಧಾರ್ಮಿಕ ಚಿಂತನೆ ಭದ್ರಬುನಾದಿ

ಇಂದಿರಾ ಎನ್ ಕೆ

ಕೋಟ: ಮಕ್ಕಳಲ್ಲಿ ಬಾಲ್ಯಾವಸ್ಥೆಯಲ್ಲೆ ಧಾರ್ಮಿಕ ಚಿಂತನೆ ಪಸರಿಸಿದರೆ ಅವರ ತಳಹದಿ ಗಟ್ಟಿಗೊಳ್ಳುತ್ತದೆ ಅಲ್ಲದೆ ಸಂಸ್ಕಾರಯುತವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಸೇವಾ ಸಂಗಮ ಟ್ರಸ್ಟ್, ಕುಂದಾಪುರದ ವಿಶ್ವಸ್ಥ ಮಂಡಳಿ ವಿಶ್ವಸ್ಥರಾದ ಶಿವರಾಮ ಉಡುಪ ಹೇಳಿದರು.

ಕೋಟದ ಸೇವಾ ಸಂಗಮ ಶಿಶುಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಂಸ್ಕೃತಿಕ ಚಿಂತಕಿ ಸದಾರಮೆ ಕಾರಂತ್, ಕೋಟ ವಲಯದ ಕುಟುಂಬ ಪ್ರಬೋಧನ್ ಪ್ರಮುಖ್ ಸಂತೋಷ್ ಪ್ರಭು, ವ್ಯವಸ್ಥಾಪಕಿ ಭಾಗ್ಯವಾದಿರಾಜ್, ಉಪಾಧ್ಯಕ್ಷೆ ಗೀತಾ ಆನಂದ್ ಸಿ. ಕುಂದರ್ ಉಪಸ್ಥಿತರಿದ್ದರು.

ಭಾಗ್ಯೆಶ್ವರಿ ಮಯ್ಯ ನಿರೂಪಿಸಿದರು. ಕೋಟ ಸೇವಾ ಸಂಗಮ ಅಧ್ಯಕ್ಷೆ ನಾಗಲಕ್ಷ್ಮೀ ಹೆಗಡೆ ಸ್ವಾಗತಿಸಿ, ಕಾರ್ಯದರ್ಶಿ ಸುಷ್ಮಾ ದಯಾನಂದ ಹೊಳ್ಳ ವಂದಿಸಿದರು. ಕೋಟ ಸಾಲಿಗ್ರಾಮ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಶಿಶುಮಂದಿರ, ಬಾಲಗೋಕುಲ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದ ಮಾತೆಯರಿಗೆ ಬಹುಮಾನ ನೀಡಲಾಯಿತು. ಶಿಶುಮಂದಿರ, ಬಾಲಗೋಕುಲ ಮತ್ತು ಮಾತೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.