ಬಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ . 
ಜಿಲ್ಲೆ

ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಗೆ ಪ್ರತಿನಿಧಿಗಳ ನೇಮಕ

ಕೊಟ್ಟೂರು: ವಿಜಯನಗರ-ಬಳ್ಳಾರಿ ಜಿಲ್ಲೆ ಒಳಗೊಂಡ ಬಿಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರನ್ನು ಆಯ್ಕೆ ಮಾಡಲು ಪ್ರತಿನಿಧಿಗಳ ನೇಮಕ ಪ್ರಕ್ರಿಯೆ ಆರಂಭವಾಗಿದೆ. ತಾಲೂಕಿನಲ್ಲಿ 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ತಲಾ ಒಬ್ಬ ಪ್ರತಿನಿಧಿಯನ್ನು ನೇಮಿಸಲಾಗಿದೆ.

ಬಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಹೊಸಪೇಟೆಯಲ್ಲಿದ್ದು. 16 ನಿರ್ದೇಶಕ ಸ್ಥಾನಗಳಿವೆ. ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಸಹಕಾರ ಸಂಘ ಹಾಗೂ ಟಿಎಪಿಸಿಎಂಎಸ್‌ಪತ್ತಿನ ಸಹಕಾರ ಸಂಘಗಳ ಸದಸ್ಯರು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗೆ ಮತಹಾಕಲಿದ್ದು, ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಪ್ರತಿನಿಧಿಗಳ ನೇಮಿಸುವಲ್ಲಿ ನಿರತರಾಗಿದ್ದಾರೆ.

ಕೊಟ್ಟೂರು ತಾಲೂಕಿನಲ್ಲಿ ಪ್ರಾಕೃಪಸ ಸಂಘದಿಂದಲೂ ಪ್ರತಿನಿಧಿಗಳ ನೇಮಕ ಮಾಡಲಾಗಿದೆ. ರಾಂಪುರ ಪ್ರಾಕೃಪಸ ಸಂಘದ ಬಿ. ಪುಲಿಕೇಶಿ, ಕೊಟ್ಟೂರು ಸಂಘದ ದಾರುಕೇಶ. ಉಜ್ಜಿನಿ ಎಂ.ಗುರುಸಿದ್ದನಗೌಡ, ತೂಲಹಳ್ಳಿ ಎಂ.ವೀರೇಶ. ದೂಪದಹಳ್ಳಿ ಮಣಿಕಂಠ, ಅಂಬಳಿ ಭರಮನರಡ್ಡಿ, ಕೋಗಳಿ ಹೇಮಗಿರಿಗೌಡ, ನಿಂಬಳಗೇರಿ ಹನುಮಂತಪ್ಪ, ಕೆ.ಅಯ್ಯನಹಳ್ಳಿ ಸತೀಶ, ಅಲಬೂರು ಪ್ರಕಾಶ ಪ್ರತಿನಿಧಿಗಳಾಗಿ ನೇಮಕವಾಗಿದ್ದಾರೆ.