More

    ಬಿಡಿಸಿಸಿ ಬ್ಯಾಂಕ್‌ಗೆ 12 ಕೋಟಿ ರೂ. ಲಾಭ: ಪ್ರಭಾರ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಮಾಹಿತಿ

    ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ 2022-23ನೇ ಸಾಲಿಗೆ 12.31 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಪ್ರಭಾರ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ವರ್ಷ 9.56 ಕೋಟಿ ರೂ. ಇದ್ದ ಲಾಭವಾಗಿತ್ತು. ಈ ವರ್ಷ 3 ಕೋಟಿ ರೂ. ಲಾಭ ಹೆಚ್ಚಾಗಿದೆ ಎಂದರು. 2022-23ನೇ ಸಾಲಿಗೆ ಬ್ಯಾಂಕಿನ ಒಟ್ಟು ದುಡಿಮೆಯ ಬಂಡವಾಳ 2362.87 ಕೋಟಿ ರೂ. ಹೊಂದಿತ್ತು. 125.53 ಕೋಟಿ ರೂ. ಷೇರು ಬಂಡವಾಳ, 209.04 ಕೋಟಿ ರೂ. ಸ್ವಂತ ಬಂಡವಾಳ, 1437.11 ಕೋಟಿ ರೂ. ಠೇವಣಿ ಬಂದಿದ್ದು, 1440.54 ಕೋಟಿ ರೂ. ಸಾಲ ವಿತರಿಸಲಾಗಿದೆ. ಆ ಪೈಕಿ ಕೃಷಿ, ಕೃಷಿಯೇತರರು ಸೇರಿದಂತೆ ಒಟ್ಟಾರೆ ಸಾಲ ವಸೂಲಾತಿಯಲ್ಲಿ ಶೇ.94.12 ಪ್ರಗತಿ ಸಾಧಿಸಿದೆ. ಎನ್‌ಪಿಎ 4.15 ರಷ್ಟಿದ್ದು, ಇನ್ನುಳಿದಂತೆ ಬ್ಯಾಂಕ್ ವ್ಯವಹಾರದಲ್ಲಿ 12.31 ಕೋಟಿ ರೂ. ಲಾಭ ಗಳಿಸಿದೆ ಎಂದು ವಿವರಿಸಿದರು.

    ಬಳ್ಳಾರಿ 5, ವಿಜಯನಗರ ಜಿಲ್ಲೆಯ 6 ಸೇರಿದಂತೆ ಒಟ್ಟು 11 ತಾಲೂಕು ವ್ಯಾಪ್ತಿಯ 33 ಶಾಖೆಗಳಲ್ಲಿ 294 ನೌಕರರಿದ್ದು, ಸಿಬಿಎಸ್ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದೊರೆಯುವ ಬಹುತೇಕ ಸೇವೆಗಳನ್ನು ಬಿಡಿಸಿಸಿ ಒದಗಿಸುತ್ತಿದೆ. ಈ ಮೂಲಕ ಅವಳಿ ಜಿಲ್ಲೆಯ ಗ್ರಾಹಕರ ವಿಶ್ವಾಸ ಉಳಿಸಿಕೊಂಡಿದ್ದು, ಯಶಸ್ಸಿನ ಹಾದಿಯಲ್ಲಿ ಸಾಗಿದೆ ಎಂದರು.

    ಬ್ಯಾಂಕ್ ಸಿಇಒ ಬಿ.ಎಸ್.ಹರಿಶ್, ನಿರ್ದೇಶಕರಾದ ಜೆ.ಎಂ.ವೃಷಭೇಂದ್ರಯ್ಯ, ಟಿ.ಎಂ.ಚಂದ್ರಶೇಖರಯ್ಯ, ಡಿ.ಭೋಗಾರೆಡ್ಡಿ, ಎಂ.ಗುರುಸಿದ್ದನಗೌಡ, ಕೋಳೂರು ಮಲ್ಲಿಕಾರ್ಜುನ ಗೌಡ, ಎಲ್.ಎಸ್.ಆನಂದ, ಕೆ.ರವೀಂದ್ರನಾಥ, ಚಿದಾನಂದ ಐಗೋಳ, ಬಿ.ಕೆ.ಪ್ರಕಾಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts