ಮಧೂರು: ರಾಮರಾಜ ಕ್ಷತಿಯ ಯಾನೆ ಕೋಟೆಯಾರ್ ಸೇವಾಸಂಘ ಕಾಸರಗೋಡು ಉಪಸಂಘ ಕೂಡ್ಲು ವಾರ್ಷಿಕ ಮಹಾಸಭೆ ನಿವೃತ್ತ ಎಎಸ್‌ಐ ಪುರುಷೋತ್ತಮ ಕೂಡ್ಲು ನಿವಾಸದಲ್ಲಿ ಉಪಸಂಘದ ಅಧ್ಯಕ್ಷ ಬಿ.ಸತೀಶ ಅಧ್ಯಕ್ಷತೆಯಲ್ಲಿ ಜರುಗಿತು.
ಜಿಲ್ಲಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಉದ್ಘಾಟಿಸಿ ಮಾತನಾಡಿ, ಸಮಾಜದ ಅವಶ್ಯಕತೆ ಕುರಿತು ತಿಳಿಸಿದರು. ಕೋಟೆಯಾರ್ ಸಮಾಜದವರನ್ನು ಒಬಿಸಿಯ ಎಸ್‌ಇಬಿಸಿ ಪಟ್ಟಿಗೆ ಸೇರಿಸುವ ಕೆಲಸ 2016ರಿಂದ ಸತೀಶ್ ಮಾಸ್ತರ್ ಮತ್ತಿತರರ ಪ್ರಯತ್ನದ ಫಲವಾಗಿ ಯಶಸ್ಸು ಕಾಣುವ ದಾರಿಯಲ್ಲಿದೆ. ಮುಖ್ಯಮಂತ್ರಿಯವರ ಸಹಿಗಾಗಿ ಕಡತ ಅವರ ಮೇಜಿನ ಮೇಲಿದೆ ಎಂದರು. ಜಿಲ್ಲಾ ಸಂಘದ ಕೋಶಾಧಿಕಾರಿ ಸತೀಶ್ ಮಾಸ್ತರ್ ಜಿಲ್ಲಾ ಸಂಘ ಕೊಡುವ ಸೌಲಭ್ಯದ ಕುರಿತು ವಿವರಣೆ ನೀಡಿದರು. ಉಪ ಸಂಘದ ಕಾರ್ಯದರ್ಶಿ ಚಂದ್ರಶೇಖರ ಗತ ವರ್ಷದ ವರದಿ ಮಂಡಿಸಿದರು. ಕೋಶಾಧಿಕಾರಿ ಸತೀಶ್ ಕೆ. 2023-24ನೇ ವರ್ಷದ ಲೆಕ್ಕಪತ್ರ ಮಂಡಿಸಿದರು. ಚರ್ಚಿಸಿದ ಬಳಿಕ ಅಂಗೀಕರಿಸಲಾಯಿತು.
ಜಿಲ್ಲಾ ಸಂಘದಿಂದ ಕೊಡಮಾಡಿದ ಯುಗಾದಿಯ ಉಡುಗೊರೆಯನ್ನು ಜಿಲ್ಲಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ವಿತರಿಸಿದರು. ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಸಿಪಿಸಿಆರ್‌ಐಯ ಪಾಂಡುರಂಗ, ವೆಂಕಟೇಶ, ರಾಜೇಂದ್ರ, ಪುಷ್ಪಲತಾ, ಸ್ವರ್ಣಲತಾ ಉಪಸ್ಥಿತರಿದ್ದರು.