ಕಾಸರಗೋಡು: ಇತಿಹಾಸ ಪ್ರಸಿದ್ಧ ಕಾಸರಗೋಡು ಕೋಟೆ ಚಾವಡಿ ಶ್ರೀ ದೂಮಾವತಿ ದೈವ ಕೋಲ ಅ.31ರಂದು ನಡೆಯಲಿದೆ. ದೀಪಾವಳಿ ನೇಮೋತ್ಸವ ಎಂದೇ ಪ್ರಖ್ಯಾತಿ ಪಡೆದಿರುವ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಯಿತು.
ಉತ್ಸವ ಸಮಿತಿ ಅಧ್ಯಕ್ಷ ಪಾಂಗೋಡು ನವೀನ್ ನಾಯ್ಕ ನಾಗರಕಟ್ಟೆ, ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ಹಾಗೂ ಉತ್ಸವ ಸಮಿತಿ ಕೋಶಾಧಿಕಾರಿ ವಾಮನ್ ರಾವ್ ಬೇಕಲ ಅವರಿಗೆ ಆಮಂತ್ರಣ ಪತ್ರಿಕೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ನಾಗೇಶ್ ನಾಯಕ್ ಮಂಗಳೂರು, ಉದ್ಯಮಿ ನಿರಂಜನ್ ಕೊರಕ್ಕೊಡು, ಸಂತೋಷ್ ನಾಯ್ಕ ಪುತ್ತೂರು, ಭಾಸ್ಕರ್ ರಾವ್ ಮಂಗಳೂರು, ರಮೇಶ್ ಕುಂಬಳೆ, ಜಯಂತಿ ಕೋಟೆಕಣಿ, ಕಾರ್ತಿಕ್ ಕಾಸರಗೋಡು, ಪ್ರಜ್ವಲ್ ನಾಯ್ಕ ನಾಗರಕಟ್ಟೆ, ಶ್ರೀಕಾಂತ್ ನಾಗರಕಟ್ಟೆ, ಕನ್ನಡ ಭವನದ ಸಂಧ್ಯಾರಾಣಿ ಮೊದಲಾದವರು ಉಪಸ್ಥಿತರಿದ್ದರು.