ಕೊಪ್ಪಳದ ಗವಿದ್ಧೇಶ್ವರ ಮಠದ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿರುವ ಫಲ-ಪುಷ್ಪ ಪ್ರದರ್ಶನದಲ್ಲಿ ಚಂದ್ರಯಾನ-3ರ ಪುಷ್ಪದಲ್ಲಿ ಅರಳಿರುವುದು. 
ಜಿಲ್ಲೆ

ಫಲಪುಷ್ಪದಲ್ಲಿ ಅರಳಿದ ಚಂದ್ರಯಾನ-3

ಕೊಪ್ಪಳ: ಸಿರಿಧಾನ್ಯಗಳ ಮಹತ್ವ, ಅಂಗೈ ಅಗಲ ಕೈತೋಟ, ಆಕಾಶದಗಲ ಆರೋಗ್ಯ ಎನ್ನುವ ಮಹತ್ವ ಸಾರುವ ಫಲಪುಷ್ಪ ಹಾಗೂ ಕೃಷಿ ವಸ್ತುಗಳ ಪ್ರದರ್ಶನ ಗವಿಸಿದ್ಧೇಶ್ವರ ಜಾತ್ರೋತ್ಸವದ ಸೊಬಗು ಹೆಚ್ಚಿಸಿದೆ.

ಅಂಗೈ ಅಗಲ ಕೈತೋಟ, ಆಕಾಶದಗಲ ಆರೋಗ್ಯ

ಕಲ್ಲಂಗಡಿಯಲ್ಲಿ ಕೆತ್ತನೆ: ರಂಗೋಲಿಯಲ್ಲಿ ಅರಳಿದ ಸಾಂಸ್ಕೃತಿಕ ನಾಯಕ ಬಸವಣ್ಣ, ಶ್ರೀಶಿವಶಾಂತವೀರ ಸ್ವಾಮೀಜಿ, ಫಲಪುಷ್ಪದಲ್ಲಿ ಚಂದ್ರಯಾನ-3 ಹಾಗೂ ಕಲ್ಲಂಗಡಿಯಲ್ಲಿ ಕೆತ್ತನೆ ಮಾಡಲಾದ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಚಿತ್ರ ನೋಡುಗರ ಗಮನ ಸೆಳೆಯಿತು.

ಪೌಷ್ಟಿಕ ತೋಟಗಳ ಕುರಿತು ತೋಟಗಾರಿಕೆ ಇಲಾಖೆ 50ಕ್ಕೂ ಹೆಚ್ಚು ವಿವಿಧ ತಾರಸಿ ತೋಟ ಮತ್ತು ಕೈತೋಟ ಮಾದರಿಗಳನ್ನು ತಯಾರಿಸಿದೆ. ಸಾವಯವ ತರಕಾರಿ ಬೆಳೆದು, ಸಾರ್ವಜನಿಕರು ಆರೋಗ್ಯ ಹೆಚ್ಚಿಸಿಕೊಳ್ಳುವಂತಹ ಮಾದರಿಗಳನ್ನು ನಿರ್ಮಿಸಲಾಗಿದೆ. ವಿವಿಧ ಸಾಮಗ್ರಿ ಉಪಯೋಗಿಸಿ ಪೌಷ್ಟಿಕ ತೋಟದಲ್ಲಿ ನಾನಾ ತರಹದ ದೇಶಿ, ವಿದೇಶಿ ತರಕಾರಿ, ಹಣ್ಣಿನ ಗಿಡಗಳು, ಔಷಧಿ ಸಸ್ಯಗಳು, ಹೂವಿನ ತೋಟ ಮಾದರಿಯನ್ನು ನೋಡಿದ ಜನರಿಗೆ ಬೆಳೆತಯುವ ಮನಸ್ಸು ಮಾಡುವಂತೆ ಮಾಡಿತು .