More

    ಚಿರ ಯುವಕನಂತೆ ಕಾಣುವ ಅಜ್ಜನ ಹೆಲ್ತ್ ಸೀಕ್ರೆಟ್ ಏನು ಗೊತ್ತಾ ? ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ !

    ಐರ್ಲೆಂಡ್​: ಕೆಲವು ವಯಸ್ಸಾದ ವ್ಯಕ್ತಿಗಳನ್ನು ನೋಡಿದರೆ ಇವರಿಗೆ ವಯಸ್ಸೇ ಆಗುವುದಿಲ್ಲವೇ ? ಇನ್ನು ಹೇಗೆ ಇವರು ಚಿರ ಯುವಕರಂತೆ ಕಾಣುತ್ತಾರಲ್ಲ ಎಂದು ಹುಬ್ಬೇರಿಸುವುದುಂಟು. ಹೌದು ಕೆಲವರು ತಮ್ಮ ಇಳಿವಯಸ್ಸಿನಲ್ಲಿ ಯೌವನಸ್ಥರಾಗಿ ಕಾಣುತ್ತಾರೆ.

    ಇದನ್ನೂ ಓದಿ:ನೀವು ರೂ 1 ಲಕ್ಷ ಹೂಡಿದ್ದರೆ ರೂ 1.95 ಕೋಟಿಗೆ ಏರಿಕೆ: ರೂ. 17ರಿಂದ ರೂ. 3317ಗೆ ಹೆಚ್ಚಳವಾದ ಈ ಷೇರಿಗೆ ಈಗಲೂ ಬೇಡಿಕೆ

    ಇದೀಗ ಐರ್ಲೆಂಡ್ ನಿವಾಸಿಯಾಗಿರುವ ರಿಚರ್ಡ್ ಮೋರ್ಗನ್ ವೈರಲ್ ಆಗಿದ್ದಾರೆ. ಇವರ ವಯಸ್ಸು 93. ಆದರೆ ಈಗಲೂ 40 ಅಥವಾ 50 ವಯಸ್ಸಿನ ಆಸುಪಾಸಿನ ವ್ಯಕ್ತಿಯಂತೆ ಕಾಣುತ್ತಾರೆ. ಈ ಇಳಿವಯಸ್ಸಿನಲ್ಲಿ ತಮ್ಮ ವಯಸ್ಸಿನ ಕಾರಣಕ್ಕೆ ಖ್ಯಾತರಾಗಿದ್ದಾರೆ. ಈ ವೃದ್ಧನ ಹೆಸರು ರಿಚರ್ಡ್ ಮೋರ್ಗನ್. ಇವರು ಮೂಲತಃ ಐರ್ಲೆಂಡ್​ದವರು. ಇವರ ವಯಸ್ಸು 93. ಈಗಲೂ ಸಹ ಫಿಟ್ ಆಗಿದ್ದಾರೆ.

    ಬದುಕಿನ ಇಳಿ ವಯಸ್ಸಿನಲ್ಲಿ ಇಷ್ಟು ಫಿಟ್ ಆಗಿರುವ ಇವರ ಆರೋಗ್ಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಮೂಲತಃ ಕ್ರೀಡಾಪಟುವಾಗಿರುವ ಇವರ ಉತ್ತಮ ಆರೋಗ್ಯದ ಕುರಿತಾದ ವರದಿ ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯಲ್ಲಿ ಪ್ರಕಟವಾಗಿದೆ. ಈ ವರದಿಯಲ್ಲಿ ರಿಚರ್ಡ್ ಮೊರ್ಗನ್ ಅವರ ತರಬೇತಿ, ಆಹಾರ ಹಾಗೂ ಆರೋಗ್ಯದ ಕುರಿತಾದ ಮಾಹಿತಿ ಇದೆ ತಿಳಿಸಿದ್ದಾರೆ.

    ಚಿರ ಯುವಕನಂತೆ ಕಾಣುವ ಅಜ್ಜನ ಹೆಲ್ತ್ ಸೀಕ್ರೆಟ್ ಏನು ಗೊತ್ತಾ ? ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ !

    93 ವರ್ಷದ ರಿಚರ್ಡ್ ಅವರು ಇಂಡೋರ್ ರೋಯಿಂಗ್ ನಲ್ಲಿ ನಾಲ್ಕು ಬಾರಿ ವರ್ಲ್ಡ್ ಚಾಂಪಿಯನ್ ಆಗಿದ್ದಾರೆ. ಜೊತೆಗೆ ಅವರು ಬೇಕರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಿಚರ್ಡ್ ಅವರು ತಮ್ಮ ಆರೋಗ್ಯದ ಬಗ್ಗೆ ಐರಿಶ್ ಎಕ್ಸಾಮಿನರ್ ಜೊತೆ ಮಾತನಾಡಿದರು. ನಾನು 70ರ ದಶಕದಿಂದಲೂ ನಿಯಮಿತವಾಗಿ ವ್ಯಾಯಾಮ ಮಾಡುತ್ತಲೇ ಇದ್ದೇನೆ. ಇದರಿಂದ ಬಹಳ ಸಂತೋಷ ಸಿಗುತ್ತದೆ. ಇವರನ್ನು ನೋಡಿದರೆ ನಮಗೆ ಸಮಯವನ್ನು ನಿಲ್ಲಿಸಲು ಆಗದೇ ಇದ್ದರೂ ವಯಸ್ಸಾದಂತೆ ಕುಂದುವ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂಬುದು ಸ್ಪಷ್ಟವಾಗುತ್ತದೆ.

    ಚಿರ ಯುವಕನಂತೆ ಕಾಣುವ ಅಜ್ಜನ ಹೆಲ್ತ್ ಸೀಕ್ರೆಟ್ ಏನು ಗೊತ್ತಾ ? ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ !

    ರಿಚರ್ಡ್ ಮೋರ್ಗನ್ ಅವರ ದಿನಚರಿಯೇ ಅವರ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅವರು ತಮ್ಮ ವ್ಯಾಯಾಮದ ದಿನಚರಿಯ ಕುರಿತು 4 ರಹಸ್ಯಗಳನ್ನು ಹಂಚಿಕೊಂಡಿದ್ದಾರೆ.

    ವ್ಯಾಯಾಮದ ರಹಸ್ಯ: ನಾನು ಪ್ರತಿನಿತ್ಯ 40 ನಿಮಿಷಗಳ ಕಾಲ ವ್ಯಾಯಾಮ ಮಾಡುತ್ತೇನೆ. ಆ 40 ನಿಮಿಷ ಸಂಪೂರ್ಣ ಸ್ಥಿರತೆ ಹಾಗೂ ಸಮರ್ಪಣಾ ಭಾವದಿಂದ ವ್ಯಾಯಾಮ ಮಾಡುತ್ತೇನೆ. ವ್ಯಾಯಾಮಕ್ಕೆ ಸ್ಥಿರತೆ ಬಹಳ ಮುಖ್ಯ. ಹಾಗೂ ಪ್ರೋಟೀನ್ ಯುಕ್ತ ಆಹಾರ ಸೇವಿಸಬೇಕು ಮತ್ತು ಪರ್ಯಾಯ ತರಬೇತಿಯ ಅವಶ್ಯಕತೆ ಹೆಚ್ಚಿರುತ್ತದೆ. ಮುಖ್ಯವಾಗಿ ವೇಟ್ ಟ್ರೇನಿಂಗ್. ಇದರಿಂದ ಸ್ನಾಯು ಬಲಗೊಳ್ಳುತ್ತದೆ ಮತ್ತು ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

    ಪ್ರತಿಶತ 70 ರಷ್ಟು ವ್ಯಾಯಾಮ ಬಹಳ ಸುಲಭವಾಗಿದೆ. ಪ್ರತಿಶತ 20 ರಷ್ಟು ಸ್ವಲ್ಪ ಕಷ್ಟಕರವಾಗಿದೆ ಹಾಗೂ ಪ್ರತಿಶತ 10 ರಷ್ಟು ವ್ಯಾಯಾಮಕ್ಕೆ ಹೆಚ್ಚಿನ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದ್ದಾರೆ.

    ರಿಚರ್ಡ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಶೋಧನಾಕಾರರು, ಅವರ ನಿಯಮಿತ ವ್ಯಾಯಾಮದಿಂದ ಅವರ ಉಸಿರಾಟ ಹಾಗೂ ಹೃದಯದ ಆರೋಗ್ಯಕ್ಕೆ ವಿಶೇಷ ಪ್ರಯೋಜನವಾಗಿದೆ. ಪ್ರೋಟೀನ್ ಆಹಾರ ಸೇವನೆಯಿಂದ ಅವರ ಸ್ನಾಯುಗಳು ಬಲಿಷ್ಠವಾಗಿವೆ. ಪ್ರತಿ ದಿನ ತನ್ನ ದೇಹದ ತೂಕದ ಪ್ರತಿ ಪೌಂಡ್‌ಗೆ ಸುಮಾರು 1 ಗ್ರಾಂ ಪ್ರೊಟೀನ್ ಅನ್ನು ತಿನ್ನುತ್ತಾನೆ ಎಂದು ತಿಳಿಸಿದ್ದಾರೆ.

    ಬಾಲಿವುಡ್ ನಟ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts