ಜಿಲ್ಲೆ

ಸಾವಿನಲ್ಲೂ ಒಂದಾದ ವೃದ್ಧ ದಂಪತಿ: ಪತ್ನಿಯ ನಿಧನದ ಸುದ್ದಿ ಕೇಳಿ ಪತಿಗೂ ಹೃದಯಾಘಾತ

ರಮೇಶ್​ ಕುಮಾರ್​​ ಬಿ ಎಡಮೋಳೆ

ಕನಕಗಿರಿ (ಕೊಪ್ಪಳ) : ಸಾವು ಯಾರಿಗೆ ಹೇಗೆಲ್ಲ ಬರುತ್ತದೊ ಗೊತ್ತಿಲ್ಲ. ಕನಕಗಿರಿ ಪಟ್ಟಣದಲ್ಲಿ ಕಳೆದ ಆರು ದಶಕಗಳ ಕಾಲ ಕೂಡಿ ಸಂತೋಷದಿಂದ ದಾಂಪತ್ಯ ಜೀವನ ನಡೆಸಿದ ಜೋಡಿಯೊಂದು ಒಂದೇ ದಿನ ಇಹಲೋಕ ತ್ಯಜಿಸಿರುವ ಮನಕಲಕುವ ಘಟನೆ ನಡೆದಿದೆ.

ಕನಕಗಿರಿ ಮಂಡಲ ಪಂಚಾಯತಿ ಮಾಜಿ ಪ್ರಧಾನ ಹಾಗೂ ಜಂಗಮ ಸಮಾಜದ ಮುಖಂಡ ಕೆ. ಮಹಾಬಳೇಶ್ವರ ಸ್ವಾಮಿ (83) ಹಾಗೂ ಅವರ ಪತ್ನಿ ಪ್ರಭಾವತಿ (78) ಒಂದೇ ದಿನದಲ್ಲಿ ಮೃತಪಟ್ಟಿದ್ದಾರೆ.

ಆದರ್ಶ ಜೀವನ ನಡೆಸಿದ ಈ ಇಬ್ಬರು, ಒಂದೇ ದಿನಕ್ಕೆ ಇಹಲೋಕ ತ್ಯಜಿಸಿರುವುದು ಕುಟುಂಬ ವರ್ಗವನ್ನು ಶೋಕದ ಕಡಲಲ್ಲಿ ಮುಳುಗುವಂತೆ ಮಾಡಿದೆ. ಬೆಳಗ್ಗೆ 12.30 ಕ್ಕೆ ಪತ್ನಿ ಪ್ರಭಾವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಳಗ್ಗೆ 5.30 ಕ್ಕೆ ಪತ್ನಿ ಸಾವಿನ ಸುದ್ದಿ ತಿಳಿದು ಮಹಾಬಳೇಶ್ವರ ಸ್ವಾಮಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.