ಮಂಗಳೂರು: ನಗರ ಹೊರವಲಯದ ಕೊಂಡಾಣ ಶ್ರೀ ಭಂಟ ಪಿಲಿಚಾಮುಂಡಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಅಶ್ಲೀಲ ವಸ್ತು ಪತ್ತೆಯಾಗಿದೆ.
ಕೆಲ ದಿನಗಳ ಹಿಂದೆ ಇಲ್ಲಿ ಜಾತ್ರೆ ನಡೆದಿದ್ದು, ಕ್ಷೇತ್ರದ ದ್ವಾರದಲ್ಲಿರುವ ಕಾಣಿಕೆ ಹುಂಡಿಯನ್ನು ಆಡಳಿತ ಮಂಡಳಿ ಭಾನುವಾರ ತೆರೆದು ಹಣ ಎಣಿಕೆ ಮಾಡಿದೆ. ಈ ವೇಳೆ ಅಶ್ಲೀಲ ವಸ್ತು ಪತ್ತೆಯಾಗಿದೆ. ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಹಿಂದೆ ಹಲವೆಡೆ ಕಾಣಿಕೆ ಹುಂಡಿಗಳಲ್ಲಿ ಇಂತಹ ವಸ್ತು ಪತ್ತೆಯಾಗಿದೆ. ಇಂತಹ ಕೃತ್ಯವೆಸಗುತ್ತಿದ್ದ ಮೂವರ ಪೈಕಿ ಇಬ್ಬರು ಪ್ರಾಣಭಯದಿಂದಇತ್ತೀಚಿಗಷ್ಟೇ ಎಮ್ಮೆಕೆರೆ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಕ್ಷಮೆಯಾಚಿಸಿದ್ದರು. ಪ್ರಮುಖ ಆರೋಪಿ ರಕ್ತಕಾರಿ ಮೃತಪಟ್ಟಿದ್ದಾನೆಂದು ಮಾ.31ರಂದು ಶರಣಾದ ಅರೋಪಿಗಳು ತಿಳಿಸಿದ್ದರು.
ಕಳೆದ ತಿಂಗಳು ಎಮ್ಮೆಕೆರೆಯ ಕೊರಗಜ್ಜನ ಕ್ಷೇತ್ರದಲ್ಲಿ ಕಿಡಿಗೇಡಿಗಳು ಮೂತ್ರ ವಿಸರ್ಜನೆ ಮಾಡಿ ಮಲಿನಗೊಳಿಸಿದ್ದು ಸಹಸ್ರಾರು ಭಕ್ತಾದಿಗಳಿಗೆ ಬೇಸರವುಂಟು ಮಾಡಿತ್ತು. ಬುಧವಾರ ಕ್ಷೇತ್ರದಲ್ಲಿ ಕೋಲ ನಡೆಯುವ ಸಂದರ್ಭ ರಾತ್ರಿ ಸುಮಾರು 10 ಗಂಟೆಗೆ ಆಗಮಿಸಿ ಕೊರಗಜ್ಜನ ಮುಂದೆ ಕಿಡಿಗೇಡಿಗಳು ಕ್ಷಮೆ ಕೇಳಿದ್ದರು.
ಓರ್ವ ದುಷ್ಕರ್ಮಿ ಕೆಲ ದಿನಗಳ ಹಿಂದೆ ಮನೆಯಲ್ಲಿಯೇ ತಲೆಯನ್ನು ಗೋಡೆಗೆ ಬಡಿದುಕೊಂಡು ಮೃತಪಟ್ಟಿದ್ದಾನೆ. ಇದೀಗ ಕ್ಷೇತ್ರದ ಕಾರಣಿಕ ಗೋಚರಿಸಿದ್ದು, ಕಿಡಿಗೇಡಿಗಳು ದೈವದ ಮುಂದೆ ಕ್ಷಮಾಪಣೆಗೆ ಮುಂದಾಗಿದ್ದರು. ಬೇರೆ ಕೋಮಿನ ಒಟ್ಟು ಹದಿಮೂರು ಜನರ ತಂಡ ಕೊರಗಜ್ಜ ಕ್ಷೇತ್ರ ಅಪವಿತ್ರಗೊಳಿಸಿರುವುದಾಗಿ ತಿಳಿದುಬಂದಿದೆ. ಇದೀಗ ಕೊಂಡಾಣ ಶ್ರೀ ಭಂಟ ಪಿಲಿಚಾಮುಂಡಿ ದೇವಸ್ಥಾನದ ಹುಂಡಿಯಲ್ಲಿ ಅಶ್ಲೀಲ ವಸ್ತು ಪತ್ತೆಯಾಗಿರುವುದು ಭಕ್ತರಲ್ಲಿ ಮೂಡಿಸಿದೆ.