ಬದಿಯಡ್ಕ: ಕೊಲ್ಲಂಗಾನ ಅರ್ತಲ ಶ್ರೀ ರಕ್ತೇಶ್ವರಿ, ನಾಗ ಗುಳಿಗ ಕ್ಷೇತ್ರದ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಶನಿವಾರ ಬೆಳಗ್ಗೆ ಆರಂಭವಾಯಿತು. ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ 108 ಕಾಯಿ ಮಹಾಗಣಪತಿ ಹೋಮ ನಡೆಯಿತು. ವಿವಿಧ ಭಜನಾ ಸಂಘಗಳು ಭಜನಾ ಸೇವೆ ನಡೆಸಿಕೊಟ್ಟರು. ಶ್ರೀ ಶಾರದಾ ಭಜನಾ ಮಂದಿರ ಕೊಲ್ಲಂಗಾನ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಕ್ಷೇತ್ರ ಪುರೋಹಿತ ಗಣೇಶ್ ಭಟ್ ಮುಂಡೋಡು ಅವರನ್ನು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಆಚಾರ್ಯ ವರಣ, ನಾಗಸನ್ನಿಧಿಯಲ್ಲಿ ವೈದಿಕ ವಿಧಿ-ವಿಧಾನಗಳು, ಪ್ರಾರ್ಥನೆ, ರಾಕ್ಷೋಘ್ನ ಹೋಮ, ವಾಸ್ತುಬಲಿ ನಡೆಯಿತು.