ಜಿಲ್ಲೆ

VIDEO| ಲೇಡಿ ಸಿಂಗಂ ಹವಾ: ಲಾಕ್​ಡೌನ್ ಉಲ್ಲಂಘಿಸಿ ಮಸೀದಿಯೊಳಗೆ ನಮಾಜ್ ಮಾಡುತ್ತಿದ್ದವರಿಗೆ ಖಡಕ್​ ಎಚ್ಚರಿಕೆ

ಕೋಲಾರ: ಕೋಲಾರದ ತಹಸೀಲ್ದಾರ್​ ಶೋಭಿತಾ ಅವರ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. .

ಕರೊನಾ ಲಾಕ್​ಡೌನ್ ಉಲ್ಲಂಘಿಸಿ ಕೋಲಾರದಲ್ಲಿ ಗುರುವಾರ ಮಸೀದಿಯೊಳಗೆ ಗುಂಪಾಗಿ ನಮಾಜ್​ ಮಾಡುತ್ತಿದ್ದರು. ಈ ವೇಳೆ ತಹಶೀಲ್ದಾರ್ ಶೋಭಿತಾ ಅವರು ಮಸೀದಿ ಒಳಗೆ ನುಗ್ಗಿ ನಮಾಜ್​ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಕಷ್ಟು ಬಾರಿ ಸರ್ಕಾರ ಸೂಚನೆ ನೀಡಿದ್ದರು ಹಾಗೂ ಖುದ್ದಾಗಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಮನವಿ ಮಾಡಿದ್ದರೂ ಅದನ್ನು ಧಿಕ್ಕರಿಸಿ ನಮಾಜ್​ ಮಾಡುತ್ತಿದ್ದವರಿಗೆ ಶೋಭಿತಾ ಅವರು ತಿಳಿಹೇಳಿದರು.

ಈ ವೇಳೆ 11 ಮಂದಿಯನ್ನು ವಶಕ್ಕೆ ಪಡೆದು ಖಡಕ್ ಎಚ್ಚರಿಕೆ ಕೊಟ್ಟು ಬಿಡುಗಡೆ ಸಹ ಮಾಡಿದರು. ಶೋಭಿತಾ ಅವರ ಕಾರ್ಯವೈಖರಿ ಸಾಬೀತುಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಲ್ಲೆಡೆ ಮೆಚ್ಚುಗೆ ಮಹಾಪೂರ ಹರಿದುಬರುತ್ತಿದೆ. ಮಸೀದಿ ಒಳಗೆ ನುಗ್ಗಿದ ಪ್ರಪ್ರಥಮ ಲೇಡಿ ಸಿಗಂ ಎಂದು ಜನರಿಂದ ಬಹುಪರಾಕ್ ಕೇಳಿಬಂದಿದೆ.