ಜಿಲ್ಲೆ

ಮಾವಿನ ತೋಟದಲ್ಲಿ ನವಜಾತ ಶಿಶು ಪತ್ತೆ: ವೈದ್ಯೆಯಿಂದ ಮಗುವಿನ ರಕ್ಷಣೆ

ಕೋಲಾರ: ಮಾವಿನ ತೋಟದಲ್ಲಿ ನವಜಾತ ಶಿಶುವೊಂದನ್ನು ಹೆತ್ತವರು ಬಿಟ್ಟು ಹೋಗಿರುವ ಘಟನೆ ಕೋಲಾರ ತಾಲ್ಲೂಕು ಅಲೇರಿ ಗ್ರಾಮದ ಬಳಿ ನಡೆದಿದೆ.

ಒಂದು ದಿನದ ನವಜಾತ ಹೆಣ್ಣುಮಗುವೊಂದನ್ನು ಆಲೇರಿ ಗ್ರಾಮದ ಬಳಿಯ ಮಾವಿನ ತೋಪಿನಲ್ಲಿಟ್ಟು ಹೋಗಿದ್ದರು, ಈ ವೇಳೆ ಸ್ಥಳೀಯರೊಬ್ಬರು ರಕ್ಷಣೆ ಮಾಡಿ ಸುಗಟೂರು ಆರೋಗ್ಯ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ಸುಗಟೂರು ಆರೋಗ್ಯ ಕೇಂದ್ರದ ವೈದ್ಯೆ ಕಾವ್ಯರವರು ಮಗುವಿಗೆ ಆರೈಕೆ ಮಾಡಿ ರಕ್ಷಣೆ ಮಾಡಿದ್ದಾರೆ. ಇನ್ನು ಮುದ್ದಾದ ಮಗುವನ್ನು ಬಿಟ್ಟು ಹೋಗಿರುವ ಪೊಷಕರಿಗೆ ಸ್ಥಳೀಯರು ಹಿಡಿಶಾಪ ಹಾಕಿದರು. (ದಿಗ್ವಿಜಯ ನ್ಯೂಸ್​)