ಜಿಲ್ಲೆ

ಧರೆಗೆ ಉರುಳಿದ ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗಿದ 200 ವರ್ಷಗಳ ಹಿಂದಿನ ಬೃಹತ್​ ಅರಳಿಮರ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಕೋಲಾರ: ಅನೇಕ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿದ ಸುಮಾರು 200 ವರ್ಷಗಳ ಅರಳಿಮರ ಧರೆಗೆ ಉರುಳಿದೆ. ಕೋಲಾರ ಗಾಂಧಿನಗರದ ಆಂಜನೇಯಸ್ವಾಮಿ ದೇವಾಲಯದ ಬಳಿಯಿದ್ದ ಮರ ಇಂದು ಬೆಳ್ಳಂಬೆಳಗ್ಗೆ ಧಾರೆಗೆ ಉರುಳಿದ್ದು ನಗರದ‌‌ ಜನತೆಗೆ‌ ಬೇಸರವನ್ನು ಉಂಟು ಮಾಡಿದೆ.

ಸುಮಾರು ವರ್ಷಗಳಿಂದ‌ ಅನೇಕ ಜೀವ‌ ಸಂಕುಲಕ್ಕೆ ಮತ್ತು ಜನ್ರಿಗೆ‌‌ ಆಶಯ ನೀಡಿದಂತಹ‌ ಬೃಹತ್ ಮರ ಇದ್ದಕ್ಕಿದ್ದಂತೆ ಉರುಳಿ ಬಿದಿದ್ದೆ.‌ ಅದೃಷ್ಟವಶಾತ್ ಯಾರ ಮೇಲೆ ಬೀಳದ‌ ಕಾರಣ ಸಾವು ನೋವು ಸಂಬಂವಿಸಿಲ್ಲ, ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮರವನ್ನು ರಸ್ತೆಯಲ್ಲಿ ಬಿದಿದ್ದ ಮರವನ್ನು ತೆರವುಗೊಳಿಸಿದ್ದಾರೆ.‌

ಇನ್ನು ಸುಮಾರು ವರ್ಷಗಳಿಂದ ಈ ಭಾಗದ ಜನ್ರಿಗೆ ನೆರಳು ಮತ್ತು ಒಳ್ಳೆ ಗಾಳಿ ನೀಡುತ್ತಿದ್ದ ಅರಳಿಮರದ ಜಾಗದಲ್ಲಿ ಮತ್ತೊಂದು ಅರಳಿಮರ ನೆಡುವಂತೆ‌ ಜನ್ರು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)