ಜಿಲ್ಲೆ

ಕೊಡವ ಜನಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್: ಯುವಕನ ಬಂಧನ

ಕೊಡಗು: ಕೊಡವ ಜನಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್​ ಹಾಕಿದ ಹೊಸ್ಕೇರಿ ಗ್ರಾಮದ ಯುವಕನನ್ನು ಬಂಧಿಸಲಾಗಿದೆ.

ಕೆ.ಬಿ.ಸುಖೇಶ್ ಬಂಧಿತ ಯುವಕ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆಯನ್ನು ಹರಿಬಿಟ್ಟಿದ್ದ. ಈ ಬಗ್ಗೆ ಮಡಿಕೇರಿ ಕೊಡವ ಸಮಾಜದಿಂದ ಪೊಲೀಸ್ ಹಾಗೂ ಉಸ್ತುವಾರಿ ಸಚಿವರಿಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.

ಈ ಹಿಂದೆಯೂ ಹೀಗೆ ಮಾಡಿದ್ದ. ಆ ಸಮಯದಲ್ಲಿ ಒಂದು ಬಾರಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ‌ನೀಡಲಾಗಿತ್ತು. ಆದರೆ, ಎರಡನೇ ಬಾರಿಯು ನಿಂದನಾತ್ಮಕ ಹೇಳಿಕೆಯನ್ನು ಪೋಸ್ಟ್​ ಮಾಡಿದ್ದಾನೆ. ಐಪಿಸಿ ಕಾಯ್ದೆ 153-ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಖಿಲ ಕೊಡವ ಸಮಾಜದಿಂದಲೂ ದೂರು ದಾಖಲಾಗಿತ್ತು. (ದಿಗ್ವಿಜಯ ನ್ಯೂಸ್​)