ಜಿಲ್ಲೆ

ಕ್ಷೇತ್ರೀಯ ಮಟ್ಟದ ಜ್ಞಾನ ವಿಜ್ಞಾನ ಮೇಳ

ಸೌಮ್ಯ ಆರ್

ಉಳ್ಳಾಲ: ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಆವರಣದಲ್ಲಿ ವಿದ್ಯಾಭಾರತಿ ಕ್ಷೇತ್ರೀಯ ಮಟ್ಟದ ಜ್ಞಾನ ವಿಜ್ಞಾನ ಮೇಳ ನಡೆಯಿತು.

ಯು.ಆರ್.ರಾವ್‌ಸೆಟಲೈಟ್ ಸೆಂಟರ್‌ನ ಮಾಜಿ ನಿರ್ದೇಶಕಿ ಎಂ.ಎಸ್.ಶ್ರೀನಿವಾಸನ್ ಮೇಳ ಉದ್ಘಾಟಿಸಿದರು. ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.

ಶಾರದಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕಲ್ಕೂರ, ಟ್ರಸ್ಟಿ ಸುಧಾಕರ್ ರಾವ್ ಪೇಜಾವರ, ವಿದ್ಯಾಭಾರತಿಯ ಕ್ಷೇತ್ರೀಯ ಪ್ರಶಿಕ್ಷಣ ಪ್ರಮುಖ ಸೂರ್ಯನಾರಾಯಣ ರಾವ್, ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್, ಪ್ರಾಂತ ವೇದಗಣಿತ ಪ್ರಮುಖ ತುಕಾರಾಮ್ ಚಿಟ್ಟ, ಸಂಸ್ಕೃತಿ ಜ್ಞಾನ ಪರಿಚಯ ಪ್ರಮುಖ ನಾಗೇಂದ ದೊಡ್ಡಮಣಿ ಉಪಸ್ಥಿತರಿದ್ದರು.

ಶಾರದಾ ವಿದ್ಯಾನಿಕೇತನ ಡೇಬೋರ್ಡ್ ಶಾಲೆಯ ಪ್ರಾಂಶುಪಾಲ ಮೋಹನ್ ದಾಸ್ ಸ್ವಾಗತಿಸಿದರು. ಪ್ರಾಂತ ವಿಜ್ಞಾನ ಪ್ರಮುಖ ಮನ್ಸೂರ್ ಅವಂಟಿ ವರದಿ ವಾಚಿಸಿದರು. ಎಸ್.ವಿ.ಹೊನ್ನುಂಗುರ ಪ್ರಾಸ್ತಾವಿಕ ಮಾತನಾಡಿದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ್ ಕಟೀಲ್ ವಂದಿಸಿದರು. ಶಾರದಾ ಸಮೂಹ ಸಂಸ್ಥೆಗಳ ಆಪ್ತಸಮಾಲೋಚಕ ಡಾ.ಗುರುರಾಜ್ ಇಟಗಿ ಕಾರ್ಯಕ್ರಮ ನಿರೂಪಿಸಿದರು.