ಗಂಗಾವತಿ ಕಸಾಪ ಭವನದ ಆವರಣದಲ್ಲಿ ಕಿಷ್ಕಿಂದಾ ಜಿಲ್ಲೆ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಭಾನುವಾರ ಮಾತನಾಡಿದರು. ವಕೀಲರ ಸಂಘದ ತಾಲೂಕು ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ, ಪ್ರಮುಖರಾದ ಮಂಜುನಾಥ ಕಟ್ಟಿಮನಿ, ಲಿಂಗನಗೌಡ ಹೇರೂರು, ಪ್ರಲ್ಹಾದ ಜೋಶಿ, ಚನ್ನಬಸವ ಜೇಕಿನ್, ಶಾಹೀನ್ ಕೌಸರ್ ಇದ್ದರು. 
ಜಿಲ್ಲೆ

ಜಿಲ್ಲಾ ಹೋರಾಟ ಸಮಿತಿಯಲ್ಲಿ ಎಲ್ಲರಿಗೂ ಪ್ರಾಶಸ್ತ್ಯ

ಗಂಗಾವತಿ: ಕಿಷ್ಕಿಂದಾ ಜಿಲ್ಲೆ ಹೋರಾಟಕ್ಕಾಗಿ ತಾತ್ಕಾಲಿಕ ಸಂಚಾಲಕ ಸಮಿತಿ ಅಸ್ತಿತ್ವಕ್ಕೆ ತರಲಾಗುತ್ತಿದ್ದು, ಪಕ್ಷಾತೀತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಪ್ರತಿನಿಧಿ ಹಾಗೂ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಹೇಳಿದರು.

ಜಿಲ್ಲಾ ರಚನೆ ಬೇಡಿಕೆ ದೀರ್ಘಾವಧಿ ಹೋರಾಟ

ನಗರದ ಕಸಾಪ ಭವನದ ಆವರಣದಲ್ಲಿ ಕಿಷ್ಕಿಂದಾ ಜಿಲ್ಲೆ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾನುವಾರ ಮಾತನಾಡಿದರು. ಜಿಲ್ಲಾ ರಚನೆ ಬೇಡಿಕೆ ದೀರ್ಘಾವಧಿ ಹೋರಾಟವಾಗಲಿದೆ. ಎಲ್ಲ ರೀತಿಯಿಂದಲೂ ನೆರವು ನೀಡುವ ಪ್ರಮುಖರನ್ನೊಳಗೊಂಡ ಸಮಿತಿ ರಚಿಸಲಾಗುವುದು. ಸಂಚಾಲಕ ಸಮಿತಿಗಾಗಿ ಸದಸ್ಯರಿಂದಲೇ ಅಭಿಪ್ರಾಯ ಪಡೆದುಕೊಳ್ಳಲಾಗುತ್ತಿದ್ದು, ಒಮ್ಮತಕ್ಕೆ ಆದ್ಯತೆ ನೀಡಲಾಗುವುದು ಎಂದರು.

ನಗರಸಭೆ ಸದಸ್ಯ ಶರಭೋಜಿ ಗಾಯಕ್ವಾಡ್, ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಸಂತೋಷ ಕೆಲೋಜಿ, ಸಂಗಮೇಶ ಸುಗ್ರೀವಾ, ಪವನಕುಮಾರ ಗುಂಡೂರು, ಮಂಜುನಾಥ ಕಟ್ಟಿಮನಿ, ಲಿಂಗನಗೌಡ ಹೇರೂರು, ಪ್ರಲ್ಹಾದ ಜೋಶಿ, ಚನ್ನಬಸವ ಜೇಕಿನ್, ಪಂಪಣ್ಣನಾಯಕ, ವಿರೂಪಾಕ್ಷಗೌಡ ನಾಯಕ, ವಿಠ್ಠಲನಾವಟೆ, ಎಂ.ಜೆ.ಶ್ರೀನಿವಾಸ, ನಾಗರಾಜ್ ಗುತ್ತೇದಾರ್, ಸರ್ವೇಶ ವಸದ್, ಜಗನ್ನಾಥ ಆಲ್ಲಂಪಲ್ಲಿ, ಶಾಹೀನ್ ಕೌಸರ್ ಇತರರಿದ್ದರು.