More

    ದೂದ್​ಸಾಗರ್ ನೋಡಲೆಂದು ಹೋದ ಯುವಕರನ್ನು ಪೊಲೀಸರು ಬಸ್ಕಿ ಹೊಡೆಸಿ ವಾಪಸ್ ಕಳಿಸಿದ್ರು!

    ಉತ್ತರಕನ್ನಡ/ಕಾರವಾರ: ಇವರೊಂದಷ್ಟು ಯುವಕರು ದೂದ್​ಸಾಗರ್ ನೋಡಿ ಖುಷಿಪಡಲೆಂದು ಹೋಗಿದ್ದರು. ಅದಾಗ್ಯೂ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಬರುವಂತಾಗಿದೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ.. ಆದರೆ ಇವರು ಅಷ್ಟು ದೂರ ಹೋಗಿ ಬಸ್ಕಿ ಹೊಡೆದು ವಾಪಸ್ ಬಂದಿದ್ದಾರೆ.

    ದೂದ್‌ಸಾಗರ್‌ ಜಲಪಾತ ವೀಕ್ಷಣೆ ಹಾಗೂ ಆ ಪ್ರದೇಶದಲ್ಲಿ ಟ್ರೆಕಿಂಗ್​ಗೆ ನಿಷೇಧ ಹೇರಿ ಗೋವಾ ಸರ್ಕಾರ ಇಂದು ಆದೇಶ ಮಾಡಿದೆ. ಹೀಗಾಗಿ ದೂದ್​ಸಾಗರ್ ವೀಕ್ಷಣೆಗೆಂದು ಬೆಳಗಾವಿ, ಬಾಗಲಕೋಟೆ ಹಾಗೂ ರಾಜ್ಯದ ವಿವಿಧೆಡೆಯಿಂದ ತೆರಳಿದ್ದ ಸಾವಿರಾರು ಯುವಕರಿಗೆ ಬಸ್ಕಿ ಹೊಡೆದು ವಾಪಸ್ ಬಂದಿದ್ದಾರೆ.

    ಪ್ರವಾಸಕ್ಕೆಂದು ಬಂದ ಯುವಕರನ್ನು ಅರ್ಧದಲ್ಲೇ ತಡೆಯುತ್ತಿರುವ ಪೊಲೀಸರು ಅವರಿಗೆ ಬಸ್ಕಿ ಹೊಡೆಸಿ ವಾಪಸ್ ಕಳಿಸುತ್ತಿದ್ದಾರೆ. ಗೋವಾ ಪೊಲೀಸರು ಯುವಕರನ್ನು ರೈಲ್ವೇ ಟ್ರ್ಯಾಕ್ ಬಳಿಯೇ ನಿಲ್ಲಿಸಿ ಲಾಠಿ ಹಿಡಿದು ಬಸ್ಕಿ ಹೊಡೆಸಿ ವಾಪಸ್ ಕಳಿಸುತ್ತಿದ್ದಾರೆ.

    ಇದನ್ನೂ ಓದಿ: ನೇರಳೆ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?: ಆರೋಗ್ಯಕ್ಕೇನು ತೊಂದರೆ?

    ದೂಧ್‌ಸಾಗರ್‌ಗೆ ವೀಕ್ಷಣೆಗೆ ಇಂದಿನಿಂದ ಪ್ರವೇಶ ನಿಷೇಧಿಸಿರುವ ಗೋವಾ ಸರ್ಕಾರ ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ರೈಲ್ವೇ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಿದೆ. ಗೋವಾದಿಂದ ಅನುಮತಿ ಪಡೆದು ಬಂದಿದ್ದರೆ ಮಾತ್ರ ಟ್ರೆಕ್ಕಿಂಗ್​ ತೆರಳಲು ಅವಕಾಶ ನೀಡಲಾಗುತ್ತಿದೆ.

    ಉತ್ತರಕನ್ನಡ ಗಡಿಯಲ್ಲಿರುವ ದೂದ್ ಸಾಗರ್ ಜಲಪಾತ ನೋಡಲು ಭಾನುವಾರವಾದ ಇಂದು ಸಾವಿರಾರು ಜನ ಆಗಮಿಸಿದ್ದರು. ದೂದ್ ಸಾಗರ ನೋಡಲು ರೈಲ್ವೆ ಟ್ರ್ಯಾಕ್ ಮೇಲೆ ನಡೆದು ಹೋಗುವುದನ್ನು ನಿಷೇಧಿಸಲಾಗಿದೆ. ಆದರೂ ಹಲವರು ಆಗಮಿಸುತ್ತಿದ್ದರು.

    ಭಾನುವಾರ ಒಮ್ಮೆಲೇ ಸಾವಿರಕ್ಕೂ ಅಧಿಕ‌ ಜನ ಆಗಮಿಸಿದ್ದರಿಂದ ನೈಋತ್ಯ ರೈಲ್ವೆ ಪೊಲೀಸರು, ಗೋವಾ ಪೊಲೀಸರು ಹಾಗೂ ಗೋವಾ ಅರಣ್ಯ ಸಿಬ್ಬಂದಿ ತಡೆದರು. ಕೆಲವರಿಗೆ ಬಸ್ಕಿ ಹೊಡೆಸಿ ಬಿಟ್ಟರು. ಲೋಂಡಾ ಮಾರ್ಗವಾಗಿ ತೆರಳುವಂತೆ ಸೂಚನೆ ನೀಡಿದರು.

    ಇದನ್ನೂ ಓದಿ: ಸ್ಪೆಷಲ್​ ಮಸಾಲೆ ದೋಸೆ ಜತೆ ಸಾಂಬಾರ್ ನೀಡದ್ದಕ್ಕೆ ಹೋಟೆಲ್ ಮಾಲೀಕರಿಗೆ 3,500 ರೂ. ದಂಡ!

    ಎಲ್ಲಿದೆ ದೂದ್ ಸಾಗರ?

    ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಗಡಿ ಹಾಗೂ ಗೋವಾದಲ್ಲಿ ದೂದ್ ಸಾಗರ ಹಂಚಿ ಹೋಗಿದೆ. ಜಲಪಾತ ಬೀಳುವ ಮೇಲ್ಭಾಗ ಉತ್ತರ ಕನ್ನಡವಾಗಿದ್ದರೆ, ಕೆಳಭಾಗ ಗೋವಾಕ್ಕೆ ಸೇರಿದೆ. ಜಲಪಾತದ ನಡುವೆ ರೈಲ್ವೆ ಮಾರ್ಗ ಹಾದು ಹೋಗಿದೆ.‌

    ಗೋವಾದಿಂದ ಟ್ರೆಕ್ಕಿಂಗ್​ ಮಾಡಿಕೊಂಡು, ಜೀಪ್ ಮೂಲಕ ತೆರಳಲಾಗುತ್ತದೆ. ಈ ಮೊದಲು ಜೊಯಿಡಾ ತಾಲೂಕಿನ ಕ್ಯಾಸಲ್ ರಾಕ್​ನಿಂದ ಟ್ರೆಕ್ಕಿಂಗ್​ ಮಾಡಿಕೊಂಡು ಜಲಪಾತ ನೋಡಲು ತೆರಳುತ್ತಿದ್ದರು. ಆದರೆ, ಜಲಪಾತ ನೋಡಲು ಬರುವವರ ಸಂಖ್ಯೆ ಹೆಚ್ಚಿದ್ದರಿಂದ ಈಗ ಅಲ್ಲಿ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಆದರೂ ಸಾಕಷ್ಟು ಜನ ಬರುತ್ತಿರುವುದರಿಂದ ಈಗ ರೈಲ್ವೆ ಹಾಗೂ ಗೋವಾ ಸರ್ಕಾರ ಭಾನುವಾರದಿಂದ ಕಟ್ಟುನಿಟ್ಟಿನ ಕ್ರಮ ವಹಿಸಿದೆ ಎನ್ನಲಾಗಿದೆ‌.

    ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿಸಲು ಮುಂದಾದ ಪತಿ: ಆರು ತಿಂಗಳ ಬಳಿಕ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts