ಜಿಲ್ಲೆ

ಹಳೆಯಂಗಡಿಯ ಯುವಕ ಆಪಹರಣ

ಸೌಮ್ಯ ಆರ್

ಮೂಲ್ಕಿ: ಹಳೆಯಂಗಡಿ ವೈದ್ಯನಾಥ ದೈವಸ್ಥಾನದ ಬಳಿ ನಿವಾಸಿ ಗುರುನಾಥ್ ಎಂಬುವರ ಪುತ್ರ ವಿನೀತ್‌ರಾಜ್(17) ಎಂಬುವರನ್ನು ಅಪಹರಣ ಮಾಡಿರುವುದಾಗಿ ಅವರ ತಾಯಿ ಸುಜಾತಾ ಮೂಲ್ಕಿ ಠಾಣೆಗೆ ದೂರು ನೀಡಿದ್ದಾರೆ. ಜೂ.5ರ ಮಧ್ಯಾಹ್ನ ಮಂಗಳೂರಿಗೆ ಕೆಲಸಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿ ಹೋದ ವಿನೀತ್‌ರಾಜ್ ಬಾರದೆ ಇದ್ದು ಮತ್ತೆ ಜೂನ್ 10ರಂದು ಮಧ್ಯಾಹ್ನ ಅವರ ಸಹೋದರ ದೇವದಾಸ್ ಫೋನ್ ಮಾಡಿದಾಗ ಹಲೋ ಎಂದವರು ಮತ್ತೆ ಮೊಬೈಲ್ ಸ್ವಿಚ್‌ಆಫ್ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.