ಖೋ ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲೆ ತಂಡ. 
ಜಿಲ್ಲೆ

ರಾಷ್ಟಮಟ್ಟದ ಖೋ ಖೋ ಪಂದ್ಯಾವಳಿಗೆ ಆಯ್ಕೆ: ಸಾಧನೆ ಮೆರೆದ ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲಾ ತಂಡ

ಕಿನ್ನಿಗೋಳಿ: ಎಚ್‌ಸಿಎಲ್ ಫೌಂಡೇಶನ್ ಅವರು ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಂಘಟಿಸಿದ ರಾಜ್ಯಮಟ್ಟದ ಸ್ಪೋರ್ಟ್ಸ್ ಫಾರ್ ಚೇಂಜ್ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಮಂಗಳೂರು ತಾಲೂಕು ಬಾಲಕಿಯರ ಖೋ ಖೋ ತಂಡ ಪ್ರಥಮ ಸ್ಥಾನ ಪಡೆದಿದೆ.

ಚೆನ್ನೈಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ

ಜೂ.20, 21ರಂದು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯ ಗುಂಟೂರಿನಲ್ಲಿ ನಡೆದ ದಕ್ಷಿಣ ಭಾರತ ವಲಯ ಚಾಂಪಿಯನ್ ಷಿಪ್ 2024 ರಲ್ಲಿ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿ ಲೀಗ್ ಪಂದ್ಯಾವಳಿಯಲ್ಲಿ ಕೇರಳ ತಮಿಳುನಾಡು, ತೆಲಂಗಾಣ ತಂಡವನ್ನು ಸೋಲಿಸಿ ಫೈನಲ್ ಹಂತ ಪ್ರವೇಶಿಸಿ ಆಂಧ್ರಪ್ರದೇಶ ತಂಡದೊಂದಿಗೆ 11-12 ಅಂಕಗಳ ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದು ಜು.21ರಂದು ಚೆನ್ನೈಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಪಡೆಯಿತು.

ಪ್ರಶಸ್ತಿ ಪತ್ರ ಮತ್ತು ಫಲಕ ದೊಂದಿಗೆ ತಂಡದ ತರಬೇತುದಾರರಾದ ವಿದ್ಯಾಲತಾ, ತಂಡದ ವ್ಯವಸ್ಥಾಪಕ ಡಾ.ಅನಿತ್ ಕುಮಾರ್, ಜತೆಗೆ ತಂಡದ ಕ್ರೀಡಾಪಟುಗಳಾದ ದರ್ಶಿನಿ (ತಂಡದ ನಾಯಕಿ), ದೀಕ್ಷಾ, ಸ್ಮಿತಾ, ಹರ್ಷಿತಾ, ವಿಂತಿ ಬಿ. ಶೆಟ್ಟಿ, ಭೂಮಿಕಾ ಹೆಗಡೆ, ತನ್ವಿ ಪೂಜಾರಿ, ಸಮೀಕ್ಷಾ ಮತ್ತು ರಕ್ಷಿತಾ ಇದ್ದರು.